ಬದಲಾಗುತ್ತಿದೆ ಜಗತ್ತು: ನಿಮ್ಮ ಅನ್ನವನ್ನೂ ಕಿತ್ತುಕೊಳ್ಳುತ್ತಾ Ai?

ಎಐ ಅಲಿಯಾಸ್ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಯಾನೇ ಕೃತಕ ಬುದ್ದಿಮತ್ತೆ…
ಈ ಎರಡು ಅಕ್ಷರ ಈಗ ಜಗತ್ತನ್ನೇ ನಡುಗಿಸುತ್ತಿದೆ. ಕೋವಿಡ್‌ಗಿಂತಲೂ ಹೆಚ್ಚು ಭಯ ಹುಟ್ಟಿಸುತ್ತಿದೆ.
ಐಟಿ ಸೆಕ್ಟರ್‌ನಿಂದ ಚಪರಾಸಿಯ ತನಕ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ ಒಂದೇ, ಎಐ ನಮ್ಮ ಉದ್ಯೋಗ ಕಿತ್ತುಕೊಳ್ಳುತ್ತಾ?
ಉತ್ತರ ಇಷ್ಟೇ, ಹೌದು ಮತ್ತು ಇಲ್ಲ!
ಎಐ, ಎಲ್ಲಾ ಕ್ಷೇತ್ರಗಳ ಒಳಗೆ ಯಾವ ಪರಿ ನುಗ್ಗುತ್ತಿದೆ ಎಂದರೆ ಅದರ ವೇಗ ಕಂಡು ಜಗತ್ತೇ ಬೆಚ್ಚಿಬೀಳುತ್ತಿದೆ. ತಜ್ಞರುಗಳಂತೂ ಎಐನಿಂದ ಯಾವ ಉದ್ಯೋಗ ಸುರಕ್ಷಿತ ಎಂಬ ಪಟ್ಟಿ ಮಾಡುವಲ್ಲಿ ಬಿಝಿಯಾಗಿದ್ದಾರೆ. ಪರಿಸ್ಥಿತಿ ಹೀಗಿರುವಾಗಲೇ ಮೈಕ್ರೋಸಾಫ್ಟ್ ಸಂಸ್ಥೆ ಅಧ್ಯಯನ ವರದಿಯೊಂದನ್ನು ಬಿಡುಗಡೆಗೊಳಿಸಿದೆ. ಎಐನಿಂದ ಅತೀ ಶೀಘ್ರ ನುಂಗಿಹಾಕಬಹುದಾದ ಉದ್ಯೋಗಗಳ ಪಟ್ಟಿಯನ್ನು ಮಾಡಿದೆ.
ಜನ ಯಾವುದಕ್ಕೆಲ್ಲಾ ಎಐ ಬಳಕೆ ಮಾಡುತ್ತಿದ್ದಾರೆ ಮತ್ತು ಹೇಗೆ ಮಾಡುತ್ತಿದ್ದಾರೆ ಎಂಬ ವಿಚಾರಗಳನ್ನು ಟ್ರ್ಯಾಕ್ ಮಾಡಿ ಈ ಅಧ್ಯಯನ ನಡೆದಿರುವ ಕಾರಣಕ್ಕೆ ಇದು ಸತ್ಯಕ್ಕೆ ಹತ್ತಿರ ಎಂದರೂ ತಪ್ಪಲ್ಲ.

ಹೆಚ್ಚು ಅಪಾಯದಲ್ಲಿವೆ ಈ ಕ್ಷೇತ್ರ

ಅನುವಾದಕ, ವ್ಯಾಖ್ಯಾನಕಾರ, ಇತಿಹಾಸಕಾರ, ಪ್ರಯಾಣ ಸಹಾಯಕ, ಮಾರಾಟ ಪ್ರತಿನಿಧಿ, ಬರಹಗಾರ, ಲೇಖಕ, ಗ್ರಾಹಕ ಸೇವಾ ಪ್ರತಿನಿಧಿ, ಸಿಎನ್‌ಸಿ ಟೂಲ್ ಪ್ರೋಗ್ರಾಮರ್, ಟೆಲಿಫೋನ್ ಆಪರೇಟರ್, ಟಿಕೆಟ್ ಏಜೆಂಟ್, ಪ್ರವಾಸಿ ಕ್ಲರ್ಕ್, ರೇಡಿಯೋ ಉದ್ಘೋಷಕ, ಆರ್‌ಜೆ, ಬ್ರೋಕರೇಜ್ ಕ್ಲರ್ಕ್, ಟೆಲಿಮಾರ್ಕೆಟ್, ರಾಜಕೀಯ ವಿಶ್ಲೇಷಕರು, ಸುದ್ದಿ ವಿಶ್ಲೇಷಕರು, ವರದಿಗಾರರು, ಪತ್ರಕರ್ತರು, ಗಣಿತಜ್ಞರು, ತಾಂತ್ರಿಕ ಬರಹಗಾರರು, ಪ್ರೂಫ್ ರೀಡರ್‌ಗಳು, ಹೋಸ್ಟ್‌ಗಳು, ಸಂಪಾದಕರು, ಬಿಸಿನೆಸ್ ಶಿಕ್ಷಕರು, ಪಬ್ಲಿಕ್ ರಿಲೇಶನ್ಸ್ ತಜ್ಞರು, ಉತ್ಪನ್ನ ಪ್ರದರ್ಶಕರು, ಪ್ರಚಾರಕರು, ಜಾಹೀರಾತು ಮಾರಾಟ ಏಜೆಂಟ್, ಡೇಟಾ ಸೈಂಟಿಸ್ಟ್, ವೈಯಕ್ತಿಕ ಹಣಕಾಸು ಸಲಹೆಗಾರ, ಆರ್ಥಿಕ ಶಾಸ್ತ್ರ ಶಿಕ್ಷಕರು, ವೆಬ್ ಡೆವಲಪರ್, ಮ್ಯಾನೇಜ್ಮೆಂಟ್ ವಿಶ್ಲೇಷಕರು, ಭೂಗೋಳ ಶಾಸ್ತ್ರಜ್ಞರು, ಮಾರುಕಟ್ಟೆ ಸಂಶೋಧನಾ ವಿಶ್ಲೇಷಕರು, ಪಬ್ಲಿಕ್ ಸೇಫ್ಟಿ ಟೆಲಿಕಮ್ಯುನಿಕೇಟರ್, ಸ್ವಿಚ್ ಬೋರ್ಡ್ ಆಪರೇಟರ್, ಗ್ರಂಥಾಲಯ ಶಾಸ್ತ್ರ ಶಿಕ್ಷಕರ ಉದ್ಯೋಗಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಏಕೆಂದರೆ ಇವೆಲ್ಲವೂ ಮಾಹಿತಿ, ಸಂಸ್ಕರಣೆ, ಸಂವಹನಗಳ ಮೇಲೆ ಹೆಚ್ಚು ಅವಲಂಬಿತ ಕಾಯಕಗಳಾಗಿವೆ. ಬರಹ, ವಿಶ್ಲೇಷಣೆ, ನಿರೂಪಣೆ, ಗ್ರಾಹಕ ಸೇವೆಗಳನ್ನು ಎಐ ಮಾನವನಿಗಿಂತ ಕರಾರುವಕ್ಕಾಗಿ ಮಾಡುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಈ ಕ್ಷೇತ್ರಗಳು ಹೆಚ್ಚು ಅಪಾಯದಲ್ಲಿವೆ.

ಸಧ್ಯ ಸುರಕ್ಷಿತ ಈ ಉದ್ಯೋಗಗಳು

ರಕ್ತದ ಮಾದರಿ ಸಂಗ್ರಾಹಕ, ನರ್ಸಿಂಗ್ ಅಸಿಸ್ಟೆಂಟ್, ಪೇಂಟರ್, ಪ್ಲಾಸ್ಟರ್ ಸಹಾಯಕ, ಶವಸಂಸ್ಕಾರ ಕೆಲಸಗಾರ, ಪ್ಲಾಂಟ್ ಮತ್ತು ಸಿಸ್ಟಂ ಆಪರೇಟರ್, ಬಾಯಿ ಮತ್ತು ಮುಖ ಶಸ್ತ್ರಚಿಕಿತ್ಸಕ, ವಾಹನ ಗ್ಲಾಸ್ ಅಳವಡಿಕೆ, ದುರಸ್ತಿ ಕೆಲಸಗಾರ, ಹಡಗು ಎಂಜಿನಿಯರ್, ಟೈರ್ ರಿಪೇರಿ, ಬದಲಾವಣೆ ಮಾಡುವ ಕೆಲಸಗಾರ, ಉತ್ಪಾದನಾ ಸಹಾಯಕರು, ಹೆದ್ದಾರಿ ನಿರ್ವಹಣಾ ಕೆಲಸಗಾರ, ವೈದ್ಯಕೀಯ ಉಪಕರಣ ಸಿದ್ಧಪಡಿಸುವವರು, ಪ್ಯಾಕೇಜಿಂಗ್ ಮತ್ತು ಫಿಲ್ಲಿಂಗ್ ಯಂತ್ರ ಆಪರೇಟರ್, ಯಂತ್ರ ಆಹಾರ ಪೂರೈಕೆದಾರರು, ಪಾತ್ರೆ ತೊಳೆಯುವವರು, ಅಗ್ನಿಶಾಮಕ ಅಧಿಕಾರಿ ಮೇಲ್ವಿಚಾರಕರು, ಇಂಡಸ್ಟ್ರಿಯಲ್ ಟ್ರಕ್, ಟ್ರ್ಯಾಕ್ಟರ್ ಆಪರೇಟರ್, ಕಣ್ಣಿನ ವೈದ್ಯಕೀಯ ತಂತ್ರಜ್ಞರು, ಮಸಾಜ್ ತಜ್ಞರು, ಶಸ್ತ್ರಚಿಕಿತ್ಸಾ ಸಹಾಯಕರು, ಟೈರ್ ತಯಾರಕ, ರೂಫರ್ ಸಹಾಯಕ, ಗ್ಯಾಸ್ ಕಾಂಪ್ರೆಸರ್ ಮತ್ತು ಪಂಪಿಂಗ್ ಸ್ಟೇಷನ್ ಆಪರೇಟರ್, ಮನೆ ಮೇಲ್ಚಾವಣಿ ಕೆಲಸಗಾರ, ಮನೆ ಸ್ವಚ್ಛತಾ ಸಹಾಯಕ, ಮರ ಕಡಿಯುವ ಉಪಕರಣ ಆಪರೇಟರ್, ಆಸ್ಪತ್ರೆ ಸಹಾಯಕ, ರೈಲು ಹಳಿ ಅಳವಡಿಸುವ ಮತ್ತು ನಿರ್ವಹಿಸುವ ಆಪರೇಟರ್, ಕಾಸ್ಟಿಂಗ್ ಮತ್ತು ಮೌಲ್ಡ್ ತಯಾರಕ, ನೀರು ಶುದ್ಧೀಕರಣ ಪ್ಲಾಂಟ್ ಆಪರೇಟರ್, ಸೇತುವೆ ಮತ್ತು ಲಾಕ್ ಕೆಲಸಗಾರರು, ಡ್ರೆಡ್ಜ್ ಆಪರೇಟರ್‌ಗಳ ಉದ್ಯೋಗ ಸಧ್ಯಕ್ಷೆ ಸುರಕ್ಷಿತವಾಗಿದೆ. ಇಲ್ಲಿ ಮಾನವ ಶ್ರಮ, ದೈಹಿಕ ಚಲನೆ, ಕೌಶಲ್ಯ, ರೋಗಿ ಅಥವಾ ಗ್ರಾಹಕರ ಜೊತೆ ಸಂವಹನ, ಸುರಕ್ಷತೆ, ತುರ್ತು ನಿರ್ಧಾರ ತೆಗೆದುಕೊಳ್ಳುವ ಅಗತ್ಯ ಇರುವ ಕಾರಣ ಎಐ ಇಲ್ಲಿಗೆ ಪ್ರವೇಶಿಸಲು ಇನ್ನೂ ಸಮಯ ಇದೆ.

ಇವರಷ್ಟೇ ಅಲ್ಲ, ಉನ್ನತ ಶಿಕ್ಷಣ ಪಡೆದವರ ಉದ್ಯೋಗ ಕೂಡಾ ಇಂದು ಅಪಾಯದಲ್ಲಿದೆ. ವೈದ್ಯಕೀಯ, ಡೇಟಾ ಸೈಂಟಿಸ್ಟ್, ವೆಬ್ ಡೆವಲಪರ್ ಕ್ಷೇತ್ರಗಳನ್ನೂ ಎಐ ನಿಧಾನವಾಗಿ ಆವರಿಸಿಕೊಳ್ಳುತ್ತಿದೆ. ಹೀಗಾಗಿ ಶಿಕ್ಷಣದ ಜೊತೆಗೆ ಎಐಯನ್ನು ಪಳಗಿಸಿಕೊಳ್ಳುವ ಕೌಶಲ್ಯ ಕಲಿಯುವುದೂ ಇಂದು ಅಗತ್ಯ.

ಭಯಪಡುವ ಅವಶ್ಯಕತೆ ಇಲ್ಲ. ಏನೇ ತಪ್ಪರಲಾಗ ಹೊಡೆದರೂ ಎಐ ಕೇವಲ ಶೇಕಡಾ ೬೦ ಕೆಲಸ ಮಾತ್ರವೇ ನಿಖರವಾಗಿ ಮಾಡುತ್ತದೆ. ಇದು ಮಾಲೀಕನಂತೆ ಅಲ್ಲ, ಸಹಾಯಕನಂತೆ ಕೆಲಸಮಾಡುತ್ತದೆ. ಇದು ಉದ್ಯೋಗ ಸಂಪೂರ್ಣವಾಗಿ ಕಿತ್ತುಕೊಳ್ಳುವುದಿಲ್ಲ, ಕೆಲಸದ ರೀತಿ ಬದಲಾಯಿಸುತ್ತದೆ. ಹಾಗಾಗಿ ತಂತ್ರಜ್ಞಾನ ಕೌಶಲ್ಯ ಹಾಗೂ ಸೃಜನಶೀಲತೆ ಜೊತೆಯಾಗಿ ಇರುವವರು ಇಲ್ಲಿ ಉಳಿದುಕೊಳ್ಳುತ್ತಾರೆ, ಎಐಯನ್ನು ಆಳುತ್ತಾರೆ!

Going Outside for the First Time in Months to Enjoy the Cool Air

By impossible of in difficulty discovered celebrated ye. Justice joy manners boy met resolve...

Having Fun at an Outdoor Pool that an Uncle Owns

By impossible of in difficulty discovered celebrated ye. Justice joy manners boy met resolve...

Singing Happy Birthday to Yourself Because You Deserve It

By impossible of in difficulty discovered celebrated ye. Justice joy manners boy met resolve...

- A word from our sponsor -

spot_img

LEAVE A REPLY

Please enter your comment!
Please enter your name here