ಮುಂದಿರುವ AI ಯುಗದಲ್ಲಿ ಮಾನವನ ಉದ್ಯೋಗ ಸುರಕ್ಷಿತವೇ?!

ಯಂತ್ರಗಳು ಮಾನವನ ಉದ್ಯೋಗ ಕಸಿದುಕೊಳ್ಳುತ್ತಿವೆ…
ಈ ಮಾತು ಬಹಳ ಹಿಂದಿನಿಂದಲೂ ಕೇಳಿಸುತ್ತಲೇ ಇದೆ. ಈ ಹಿಂದಿನ ಕೆಲವೊಂದು ಬೆಳವಣಿಗೆ ಕಂಡಾಗ ಇದು ಹೌದಲ್ವಾ ಅನ್ನಿಸದಿರದು. ಮಾನವ ದೈಹಿಕವಾಗಿ ಮಾಡಬೇಕಾದ ಕೆಲಸಗಳನ್ನು ಮಾಡಿಕೊಡುವ ಯಂತ್ರಗಳು ಬಂದು ಅದೆಷ್ಟೋ ಕಾಲಗಳೇ ಕಳೆದಿದಿದೆ. ಈಗ ಅವೆಲ್ಲವನ್ನು ಹಿಂದಿಕ್ಕಿ ಆತನ ಮಿದುಳಿಗೇ ಸವಾಲು ನೀಡುವ ಎಐ ತಮ್ಮ ಕೆಲಸ ಶುರು ಮಾಡಿದ್ದು, ಎಲ್ಲಾ ಮುಗಿದೇ ಹೋಯ್ತು ಎಂಬ ಆತಂಕ ಹುಟ್ಟುಹಾಕುತ್ತಿವೆ.

ದಿನದ 24 ತಾಸು ಯಾವುದೇ ಕಿರಿಕ್ ಇಲ್ಲದೆ ಕೆಲಸ ಮಾಡುವ, ರಜೆ ಅವಶ್ಯಕತೆ ಇಲ್ಲದ, ಮೂಡ್ ಸರಿಯಿಲ್ಲ, ಅನಾರೋಗ್ಯ ಎಂಬ ಯಾವುದೇ ನೆಪ ಹೇಳದ, ವೇತನ, ಭಡ್ತಿಗಳನ್ನೂ ಕೇಳದ, ಹೇಳಿದ ಕೆಲಸ ಅಚ್ಚುಕಟ್ಟಾಗಿ ಕ್ಷಣಾರ್ಧದಲ್ಲಿ ಮಾಡಿಮುಗಿಸುವ ಈ ಎಐ ಏಜೆಂಟ್ಸ್, ದುಡಿಯುವವರ ಪಾಲಿಗೆ ಪ್ರಳಯಾಂತಕ ಆಗಲಿದೆಯಾ? ಐಟಿಯಿಂದ ಹಿಡಿದು ಚಪರಾಸಿಯ ವರೆಗೆ ಎಲ್ಲರ ಉದ್ಯೋಗ ಕಿತ್ತುಕೊಳ್ಳಲಿವೆಯಾ? ಮುಂದೆ ಅವುಗಳೇ ನಮ್ಮನ್ನು ಆಳಲಿದೆಯಾ?
ಇದು ಈಗ ಜಾಗತಿಕವಾಗಿ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.

ಆದರೆ ವಾಸ್ತವ ಬೇರೆ ಇದೆ.
ವೃತ್ತಿ ಕ್ಷೇತ್ರಗಳಲ್ಲಿ ಎಐಯನ್ನು ಅಳವಡಿಸಿಕೊಳ್ಳುವ ರೀತಿ, ಅದು ಹುಟ್ಟುಹಾಕುವ ಸವಾಲು, ಅದರ ಇತಿಮಿತಿ ಅರ್ಥವಾದರೆ ಈ ಪರಿಯಲ್ಲಿ ಭಯ ಪಡುವ ಅಗತ್ಯ ಇಲ್ಲ ಎನ್ನಬಹುದು.
ಏಕೆಂದರೆ, ಅಧ್ಯಯನ ವರದಿಗಳ ಪ್ರಕಾರ ಎಐ ಅಳವಡಿಸಿಕೊಂಡ ಕಂಪನಿಗಳು ಬಹಳಷ್ಟು ಸಮಸ್ಯೆ ಎದುರಿಸುತ್ತಿವೆ. ಅನೇಕ ತಪ್ಪು, ವಿಚಿತ್ರ ಪರಿಸ್ಥಿತಿ, ನಿಯಂತ್ರಣಕ್ಕೆ ಕಷ್ಟವಾಗುವ ಗೊಂದಲದ ಸನ್ನಿವೇಶಗಳನ್ನು ಸೃಷ್ಟಿಸುತ್ತಿರುವ ಒಂದೊಂದೇ ಪ್ರಕರಣಗಳು ಈಗ ಬಹಿರಂಗವಾಗುತ್ತಿವೆ.

ಎಷ್ಟೇ ಆದರೂ ಇವು ಮಾನವರಲ್ಲ
ಮಾನವ ಕೆಲಸದ ಪ್ರತೀ ಹಂತದಲ್ಲಿಯೂ ಆಯಾ ಕ್ಷಣಕ್ಕೆ ಸಂಬಂಧಿಸಿ ನೂರಾರು ಸಣ್ಣ ನಿರ್ಧಾರ ಅತ್ಯಂತ ಸಲೀಸಾಗಿ ತೆಗೆದುಕೊಳ್ಳುತ್ತಾನೆ. ಇದು ಪ್ರೋಗ್ರಾಮ್ ಮಾಡಿರುವ ಎಐಗೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧ್ಯವಿಲ್ಲ.
ಎಐಗೆ ಏನು ಮಾಡಬೇಕು ಎನ್ನುವುದನ್ನು ಸ್ಪಷ್ಟವಾಗಿ (ಪ್ರಾಮ್ಟ್‌ನಲ್ಲಿ) ಹೇಳಬೇಕು. ಆದರೆ ಕೆಲಸದ ಅವಶ್ಯಕತೆ ಆಗಾಗ ಬದಲಾಗುತ್ತಿದ್ದರೆ ಪದೇ ಪದೇ ಅದರ ಬಗ್ಗೆ ಸೂಚನೆ ನೀಡಲು ಮಾನವನೇ ಬೇಕು.
ಇನ್ನು ಎಐ ನೀಡುವ ಫಲಿತಾಂಶಕ್ಕೆ ಖಚಿತ ಸಮಯವಿಲ್ಲ, ಖಚಿತತೆಯೂ ಇಲ್ಲ. ಕೆಲವು ಸಮಸ್ಯೆಗಳನ್ನು ಅವು ಕ್ಷಣದಲ್ಲಿ ಬಗೆಹರಿಸಬಹುದು. ಇನ್ನು ಕೆಲವನ್ನು ಸಾವಿರ ಸಲ ಪ್ರಯತ್ನಿಸಿಯೂ ಮಾಡದೇ ಇರಬಹುದು, ಅಥವಾ ನಿರೀಕ್ಷಿತ ಫಲಿತಾಂಶ ನೀಡದೆಯೂ ಇರಬಹುದು.

ಇನ್ನು ಎಐ ಪೂರ್ಣಗೊಳಿಸಿದ ಕೆಲಸ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಲು ಮತ್ತೆ ಮಾನವನೇ ಬೇಕು. ಹಣಕಾಸು, ವೈದ್ಯಕೀಯ, ತೆರಿಗೆ ಮೊದಲಾದ ಕ್ಷೇತ್ರಗಳಲ್ಲಿ ಒಂದು ಸಣ್ಣ ತಪ್ಪು ಮಾಡಿದರೂ ಅದು ಭಾರೀ ಅನಾಹುತಕ್ಕೆ ಕಾರಣವಾಗಬಹುದು. ಇದಕ್ಕೆ ಈಗಾಗಲೇ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಇತ್ತೀಚೆಗೆ ಖಾಸಗಿ ಕಂಪನಿಯೊಂದು ಎಐನಿಂದ ಅಪಾಯ ಎದುರಿಸಲಿರುವ ಉದ್ಯೋಗ ಕ್ಷೇತ್ರದ ಪಟ್ಟಿ ಮಾಡಿದೆಯಾದರೂ, ಕೋಡಿಂಗ್‌ನಂತಹಾ ಒಂದೆರಡು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಅವುಗಳನ್ನು ಪಳಗಿಸಿ ಮಾನವನಿಗಿಂತ ಕರಾರುವಕ್ಕಾಗಿ ಕೆಲಸ ತೆಗೆಸಲು ಖಂಡಿತವಾಗಿಯೂ ಬಹಳಷ್ಟು ಸಮಯಾವಕಾಶ ಬೇಕು.

Going Outside for the First Time in Months to Enjoy the Cool Air

By impossible of in difficulty discovered celebrated ye. Justice joy manners boy met resolve...

Having Fun at an Outdoor Pool that an Uncle Owns

By impossible of in difficulty discovered celebrated ye. Justice joy manners boy met resolve...

Singing Happy Birthday to Yourself Because You Deserve It

By impossible of in difficulty discovered celebrated ye. Justice joy manners boy met resolve...

- A word from our sponsor -

spot_img

LEAVE A REPLY

Please enter your comment!
Please enter your name here