HomeNEWSದೆಹಲಿಯಲ್ಲಿ ಸುಧಾರಿತ ಟೋಲಿಂಗ್ ವ್ಯವಸ್ಥೆ ಉದ್ಘಾಟನೆ: ವಾಹನ ನಿಲ್ಲಿಸದೇ ಟೋಲ್ ಪಾವತಿ, ಹೊಸ ತಂತ್ರಜ್ಞಾನಕ್ಕೆ ಚಾಲನೆ

ದೆಹಲಿಯಲ್ಲಿ ಸುಧಾರಿತ ಟೋಲಿಂಗ್ ವ್ಯವಸ್ಥೆ ಉದ್ಘಾಟನೆ: ವಾಹನ ನಿಲ್ಲಿಸದೇ ಟೋಲ್ ಪಾವತಿ, ಹೊಸ ತಂತ್ರಜ್ಞಾನಕ್ಕೆ ಚಾಲನೆ

-

spot_img

ನವದೆಹಲಿ: ದೆಹಲಿಯ ಮುಂಡ್ಕಾ-ಬಕ್ಕರ್‌ವಾಲಾ ಟೋಲ್ ಪ್ಲಾಜಾದಲ್ಲಿ ಸುಧಾರಿತ ಟೋಲಿಂಗ್ ವ್ಯವಸ್ಥೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಸಚಿವರು, ಬಹು ಪಥ ಮುಕ್ತ ಹರಿವು (MLFF) ಟೋಲ್ ಸಂಗ್ರಹ ವ್ಯವಸ್ಥೆಯ ಮೂಲಕ ಭಾರತ ತಂತ್ರಜ್ಞಾನ ಆಧಾರಿತ ಹೆದ್ದಾರಿ ನಿರ್ವಹಣೆಯ ಹೊಸ ಯುಗಕ್ಕೆ ಕಾಲಿಟ್ಟಿದೆ ಎಂದು ಹೇಳಿದರು.

ಹೊಸ ವ್ಯವಸ್ಥೆಯಿಂದ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ದೀರ್ಘ ಕಾಯುವಿಕೆ ಸಮಸ್ಯೆ ನಿವಾರಣೆಯಾಗಲಿದೆ. ಇದರಿಂದ ಇಂಧನ ಉಳಿತಾಯವಾಗುವುದರ ಜೊತೆಗೆ ಮಾಲಿನ್ಯ ಮತ್ತು ಪ್ರಯಾಣ ವಿಳಂಬವೂ ಗಮನಾರ್ಹವಾಗಿ ಕಡಿಮೆಯಾಗಲಿದೆ ಎಂದು ತಿಳಿಸಿದರು.

ಈ ಯೋಜನೆಯಿಂದ ಸುಮಾರು 285 ಕೋಟಿ ರೂಪಾಯಿ ಮೌಲ್ಯದ ಇಂಧನ ಉಳಿತಾಯವಾಗಲಿದ್ದು, ಪ್ರತಿ ವರ್ಷ 81 ಸಾವಿರ ಟನ್‌ಗಳಷ್ಟು ಇಂಗಾಲ ಹೊರಸೂಸುವಿಕೆ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಸಚಿವರು ಹೇಳಿದರು.

MLFF ವ್ಯವಸ್ಥೆಯಲ್ಲಿ FASTag, ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವಿಕೆ ಹಾಗೂ AI ಆಧಾರಿತ ಕ್ಯಾಮೆರಾ ತಂತ್ರಜ್ಞಾನ ಬಳಸಲಾಗುತ್ತಿದೆ. ಇದರ ಮೂಲಕ ವಾಹನಗಳನ್ನು ನಿಲ್ಲಿಸದೇ ಟೋಲ್ ಶುಲ್ಕವನ್ನು ಸ್ವಯಂಚಾಲಿತವಾಗಿ ಸಂಗ್ರಹಿಸಲಾಗುತ್ತದೆ.

ವಾಹನ ಚಾಲಕರು ಗಂಟೆಗೆ 100 ಕಿಲೋಮೀಟರ್ ವೇಗದಲ್ಲೇ ಟೋಲ್ ಕಾರಿಡಾರ್ ಮೂಲಕ ಸಂಚರಿಸಬಹುದಾಗಿದೆ. ಟೋಲ್ ಪಾವತಿ ನೇರವಾಗಿ ಖಾತೆಯಿಂದ ಕಡಿತಗೊಳ್ಳಲಿದೆ.

ಟೋಲ್ ಸಂಗ್ರಹ ವ್ಯವಸ್ಥೆಯ ನಿರ್ವಹಣಾ ವೆಚ್ಚವೂ ಕಡಿಮೆಯಾಗಲಿದ್ದು, ಈ ಹಿಂದೆ ಶೇಕಡಾ 15ರಷ್ಟಿದ್ದ ವೆಚ್ಚ ಈಗ ಶೇಕಡಾ 3 ರಿಂದ 4ಕ್ಕೆ ಇಳಿಯಲಿದೆ. ಇದರಿಂದ ವರ್ಷಕ್ಕೆ ಸುಮಾರು 6ರಿಂದ 7 ಸಾವಿರ ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂದು ನಿತಿನ್ ಗಡ್ಕರಿ ತಿಳಿಸಿದರು.

LEAVE A REPLY

Please enter your comment!
Please enter your name here

- Advertisment -spot_img