Latest Posts

ಗುಲ್ಮರ್ಗ್ ಅಥವಾ ಪಹಲ್ಗಾಮ್? ಕಾಶ್ಮೀರಕ್ಕೆ ಹೋಗುವ ಮುನ್ನ ಇದನ್ನು ಓದಿ

ಕಾಶ್ಮೀರಕ್ಕೆ ಹೋಗಬೇಕು ಎನ್ನುವುದು ಅನೇಕ ಜನರ ಕನಸು… ಹಿಮ ಮುಚ್ಚಿದ ಬೆಟ್ಟಗಳು, ಹಸಿರು ಕಣಿವೆಗಳು, ತಣ್ಣನೆಯ ಗಾಳಿ, ಕಣ್ಣು ತುಂಬುವ ದೃಶ್ಯಗಳು…

ಇವೆಲ್ಲ ಒಂದೇ ಸ್ಥಳದಲ್ಲಿ ಕಾಣುವ ಪ್ರದೇಶವೇ ಕಾಶ್ಮೀರ. ಆದರೆ ಮೊದಲ ಬಾರಿ ಕಾಶ್ಮೀರ ಪ್ರವಾಸ ಯೋಜನೆ ಮಾಡುವವರ ಮನದಲ್ಲಿ ಒಂದು ಪ್ರಶ್ನೆ ಖಂಡಿತ ಬರುತ್ತದೆ.

ಗುಲ್ಮರ್ಗ್ ಹೋಗಬೇಕಾ? ಪಹಲ್ಗಾಮ್ ಹೋಗಬೇಕಾ?

ಈ ಪ್ರಶ್ನೆಗೆ ಸರಳ ಉತ್ತರ ಕೊಡುವುದು ಕಷ್ಟ. ಏಕೆಂದರೆ ಎರಡೂ ಸ್ಥಳಗಳು ಸುಂದರ. ಎರಡೂ ನೆನಪಿನಲ್ಲಿ ಉಳಿಯುವ ಅನುಭವ ನೀಡುತ್ತವೆ. ಆದರೆ ಎರಡೂ ಸ್ಥಳಗಳ ಸ್ವಭಾವ ಸಂಪೂರ್ಣ ವಿಭಿನ್ನವಾಗಿದೆ.

ಗುಲ್ಮರ್ಗ್ ಹೆಸರನ್ನು ಕೇಳುತ್ತಿದ್ದಂತೆಯೇ ಜನರ ಮನದಲ್ಲಿ ಮೊದಲು ಬರುವುದು snow. ಚಳಿಗಾಲದಲ್ಲಿ ಈ ಪ್ರದೇಶ ಬಿಳಿ ಹಿಮದಿಂದ ಮುಚ್ಚಿಕೊಳ್ಳುತ್ತದೆ. ಎಲ್ಲೆಡೆ ನೋಡಿದರೂ postcard ನಲ್ಲಿ ಇರುವಂತೆ ದೃಶ್ಯ ಕಾಣಿಸುತ್ತದೆ. ಅಲ್ಲಿ ಹೋಗಿದವರು ಹೇಳುವ ಮೊದಲ ಮಾತು ‘ನಾವು ಸಿನಿಮಾದೊಳಗೆ ಬಂದಂತಾಯಿತು’.

ಗುಲ್ಮರ್ಗ್‌ನಲ್ಲಿ cable car ride ಬಹಳ ಪ್ರಸಿದ್ಧ. ಬೆಟ್ಟದ ಮೇಲಿನಿಂದ ಕೆಳಗಿನ ಕಣಿವೆಗಳನ್ನು ನೋಡುವ ಅನುಭವ ತುಂಬಾ ವಿಶೇಷ. ಹಿಮದ ನಡುವೆ ಫೋಟೋ ತೆಗೆದುಕೊಳ್ಳುವುದು, snow ಆಟ ಆಡುವುದು, skiing ಪ್ರಯತ್ನಿಸುವುದು – adventure ಇಷ್ಟಪಡುವವರಿಗೆ ಇದು perfect ಸ್ಥಳ. ಬೇಸಿಗೆಯಲ್ಲೂ ಗುಲ್ಮರ್ಗ್ ಸುಂದರವೇ. ಹಿಮ ಕಡಿಮೆಯಾದರೂ ಹಸಿರು ಮೇವುಗಾವಲುಗಳು, ತಂಪಾದ ಹವಾಮಾನ, ವಿಶಾಲ ದೃಶ್ಯಗಳು ಮನಸೆಳೆಯುತ್ತವೆ. ಗುಲ್ಮರ್ಗ್ ಎಂದರೆ ಚಲನೆ, ಉತ್ಸಾಹ, ಕಣ್ಣಿಗೆ ಅಚ್ಚರಿ, ಮನಸ್ಸಿಗೆ thrill.

ಪಹಲ್ಗಾಮ್ – ಮನಸ್ಸಿಗೆ ನೆಮ್ಮದಿ ಕೊಡುವ ಜಾಗ

ಗುಲ್ಮರ್ಗ್ ಹೃದಯವನ್ನು ತಡಕಿಸಿದರೆ, ಪಹಲ್ಗಾಮ್ ಹೃದಯವನ್ನು ಶಾಂತಗೊಳಿಸುತ್ತದೆ. ಪಹಲ್ಗಾಮ್‌ನಲ್ಲಿ ನದಿಯ ಶಬ್ದ ಕೇಳುತ್ತದೆ. ಮರಗಳ ಮಧ್ಯೆ ಗಾಳಿ ಹರಿದಂತೆ ಅನ್ನಿಸುತ್ತದೆ. ಬೆಟ್ಟಗಳು ಹತ್ತಿರ ಬಂದು ಮಾತಾಡುವಂತೆ ಭಾಸವಾಗುತ್ತದೆ. ಅಲ್ಲಿ ಗದ್ದಲ ಕಡಿಮೆ. ಬೇಗನೆ ಓಡಬೇಕಾದ ಒತ್ತಡ ಇಲ್ಲ. ಇಲ್ಲಿ ನೀವು slow ಆಗಿ ನಡೆಯಬಹುದು. ಒಂದು ಕಡೆ ಕುಳಿತು ನದಿಯನ್ನು ನೋಡಬಹುದು. ಒಂದು ಕಪ್ ಚಹಾ ಹಿಡಿದು ಪ್ರಕೃತಿಯ ಜೊತೆ ಸಮಯ ಕಳೆಯಬಹುದು. Betaab Valley, Aru Valley, Baisaran ಹೀಗೆ ಅನೇಕ ಸ್ಥಳಗಳು ಪಹಲ್ಗಾಮ್ ಸೌಂದರ್ಯವನ್ನು ಹೆಚ್ಚಿಸುತ್ತವೆ. ಕುಟುಂಬದೊಂದಿಗೆ ಹೋಗುವವರಿಗೆ, ಹಿರಿಯರಿಗೆ, honeymoon trip ಗೆ, ಮನಸ್ಸಿಗೆ ವಿಶ್ರಾಂತಿ ಬೇಕಿರುವವರಿಗೆ ಇದು ಅತ್ಯುತ್ತಮ ಆಯ್ಕೆ.

ಪಹಲ್ಗಾಮ್ ಎಂದರೆ ನೆಮ್ಮದಿ, ನಿಧಾನ, ಮನದ ವಿಶ್ರಾಂತಿ, ಪ್ರಕೃತಿಯ ಮೌನ!

ಯಾವುದು ನಿಮ್ಮಿಗೆ ಸರಿಹೊಂದುತ್ತದೆ?

ನೀವು ಯಾವ ರೀತಿಯ ಪ್ರಯಾಣಿಕರು ಎಂಬುದರ ಮೇಲೆ ಉತ್ತರ ಅವಲಂಬಿತವಾಗಿದೆ.

  • ನಿಮಗೆ excitement ಬೇಕಾದರೆ, cable car, snow, photos, adventure ಬೇಕಾದರೆ – ಗುಲ್ಮರ್ಗ್. 
  • ನಿಮಗೆ calm trip ಬೇಕಾದರೆ, river side walks, green views, relaxed stay ಬೇಕಾದರೆ – ಪಹಲ್ಗಾಮ್
  • ನಿಮಗೆ ಸ್ನೇಹಿತರ ಜೊತೆ fun trip ಇದ್ದರೆ – ಗುಲ್ಮರ್ಗ್
  • ನಿಮಗೆ ಕುಟುಂಬದ ಜೊತೆ quality time ಬೇಕಿದ್ದರೆ – ಪಹಲ್ಗಾಮ್
  • ನಿಮಗೆ honeymoon romantic peace ಬೇಕಾದರೆ – ಪಹಲ್ಗಾಮ್
  • ನಿಮಗೆ once-in-life snow memory ಬೇಕಾದರೆ – ಗುಲ್ಮರ್ಗ್

ಯಾವ season ನಲ್ಲಿ ಯಾವುದು?

ಚಳಿಗಾಲದಲ್ಲಿ ಗುಲ್ಮರ್ಗ್ ಅದ್ಭುತವಾಗಿರುತ್ತದೆ. ಹಿಮದ ಲೋಕದಂತೆ ಕಾಣುತ್ತದೆ. ಬೇಸಿಗೆಯಲ್ಲಿ ಪಹಲ್ಗಾಮ್ ತುಂಬಾ ಹಸಿರಾಗಿರುತ್ತದೆ. ತಂಪಾದ ಹವಾಮಾನದಿಂದ ಸುಂದರ family destination ಆಗುತ್ತದೆ. ಆದರೆ ಸತ್ಯ ಏನೆಂದರೆ, ಎರಡೂ ಸ್ಥಳಗಳು ವರ್ಷಪೂರ್ತಿ ತಮ್ಮದೇ ಸೌಂದರ್ಯ ಹೊಂದಿವೆ.

ಕಾಶ್ಮೀರಕ್ಕೆ 5 ಅಥವಾ 6 ದಿನ ಹೋಗುತ್ತಿದ್ದರೆ ಒಂದನ್ನೇ ಆರಿಸಬೇಡಿ. ಎರಡನ್ನೂ ನೋಡಿ. ಮೊದಲು ಗುಲ್ಮರ್ಗ್‌ಗೆ ಹೋಗಿ excitement ಅನುಭವಿಸಿ. ನಂತರ ಪಹಲ್ಗಾಮ್‌ಗೆ ಹೋಗಿ ಮನಸ್ಸಿಗೆ ವಿಶ್ರಾಂತಿ ಕೊಡಿ. ಅದೇ balanced Kashmir trip.

✨ ಕೊನೆಯಲ್ಲಿ

ಕಾಶ್ಮೀರದಲ್ಲಿ ಒಂದು ಸ್ಥಳ ನಿಮ್ಮ ಕಣ್ಣನ್ನು ಸಂತೋಷಪಡಿಸುತ್ತದೆ, ಇನ್ನೊಂದು ಸ್ಥಳ ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ.

ನೀವು ಯಾವುದು ಆರಿಸಿದರೂ, ಕಾಶ್ಮೀರ ನಿಮ್ಮ ನೆನಪಿನಲ್ಲಿ ಉಳಿಯುತ್ತದೆ!

Latest Posts

spot_imgspot_img

Fashion Week