ದೆಹಲಿಯಲ್ಲಿ ಮಾಲೀನ್ಯ ಹೆಚ್ಚಳ : ಕಟ್ಟಡ ಕಾಮಗಾರಿಗೆ ನಿಷೇಧ, 50% ವರ್ಕ್‌ ಫ್ರಂ ಹೋಮ್‌ಗೆ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲೀನ್ಯ ಹೆಚ್ಚಾಗಿದ್ದು, ಗುರುಗ್ರಾಮ ಆಡಳಿತವು ಹೊಸ ನಿರ್ಬಂಧಗಳನ್ನು ಘೋಷಣೆ ಮಾಡಿದೆ. ನವೆಂಬರ್‌ 5 ರಿಂದ ನವೆಂಬರ್ 20 ರವರೆಗೆ ಜಿಲ್ಲೆಯಾದ್ಯಂತ ಧೂಳು ಉತ್ಪಾದಿಸುವ ಕಟ್ಟಡ ನಿರ್ಮಾಣ ಅಥವಾ ಕಟ್ಟಡ ಕೆಡವುವ ಚಟುವಟಿಕೆಗಳಿಗೆ ಬ್ರೇಕ್‌ ಹಾಕಲಾಗಿದೆ.

ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಮಾಲಿನ್ಯ ಮಟ್ಟವನ್ನು ನಿಯಂತ್ರಿಸಲು ವಾಯು ಗುಣಮಟ್ಟ ನಿರ್ವಹಣಾ ಆಯೋಗ ಹೊರಡಿಸಿದ ನಿರ್ದೇಶನಗಳಿಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಇನ್ನು ವಾಹನಗಳ ಸಂಖ್ಯೆಯನ್ನು ಮಿತಿಗೊಳಿಸಲು ಸರ್ಕಾರಿ ಇಲಾಖೆಗಳು ಹಾಗೂ ಖಾಸಗಿ ಕಚೇರಿಗಳಿಗೆ ತಿಂಗಳಿನ ಅರ್ಧದಷ್ಟು ದಿನ ಮನೆಯಿಂದ ಕೆಲಸ ಮಾಡುವ ಅವಕಾಶ ನೀಡುವಂತೆ ನಿರ್ದೇಶನ ನೀಡಿದೆ.

ಆದೇಶದ ಅನ್ವಯ ಒಂದು ಕಚೇರಿಯಲ್ಲಿ ಶೇ. 50%ರಷ್ಟು ಉದ್ಯೋಗಿಗಳು ಮಾತ್ರ ಆಗಮಿಸಬೇಕು. ಉಳಿದವರು ಮನೆಯಿಂದ ಅಥವಾ ತಮ್ಮ ಊರುಗಳಿಂದ ಕೆಲಸ ಮಾಡಬೇಕು. ಮುಂದಿನ ಪಾಳಿಯಲ್ಲಿ ಆಫೀಸಿಗೆ ಬಂದ ಜನ ಮನೆಗೆ ಹಾಗೂ ಮನೆಯಲ್ಲಿರುವ ಜನ ಆಫೀಸಿಗೆ ಬಂದು ಕೆಲಸ ಮಾಡಬಹುದಾಗಿದೆ. ಉಪ ಆಯುಕ್ತ ಉತ್ತಮ್ ಸಿಂಗ್ ಮಂಗಳವಾರ ಈ ನಿರ್ದೇಶನಗಳನ್ನು ಹೊರಡಿಸಿದ್ದು, ನಿಗದಿತ ಅವಧಿಯಲ್ಲಿ ಎಲ್ಲಾ ಸಂಬಂಧಿತ ಸಂಸ್ಥೆಗಳು ನಿರ್ಬಂಧಗಳನ್ನು ಪಾಲಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ಮಾಲೀನ್ಯ ನಿಯಂತ್ರಣದ ಜೊತೆ ಜನರಿಗೆ ಬೇಕಿರುವ ಅಗತ್ಯ ಸೇವೆಗಳಿಗಾಗಿ ರಿಯಾಯಿತಿ ನೀಡಲಾಗಿದೆ. ರೈಲ್ವೆಗಳು, ಮೆಟ್ರೋ ಯೋಜನೆಗಳು, ವಿಮಾನ ನಿಲ್ದಾಣಗಳು, ಆಸ್ಪತ್ರೆಗಳು, ನೀರು ಸರಬರಾಜು ವ್ಯವಸ್ಥೆಗಳು, ನೈರ್ಮಲ್ಯ ಸೌಲಭ್ಯಗಳು ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ನಿರ್ಮಾಣ ಚಟುವಟಿಕೆಗಳನ್ನು ಸಹ ಮುಂದುವರಿಸಲು ಅನುಮತಿ ನೀಡಲಾಗಿದೆ. ಇನ್ನು ನಿರ್ಬಂಧಗಳನ್ನು ಸರಿಯಾಗಿ ಪಾಲನೆ ಮಾಡಲಾಗುತ್ತಿದೆಯೇ ಎಂದು ತಿಳಿದುಕೊಳ್ಳಲು ಆಡಳಿತವು ಸಂಬಂಧಪಟ್ಟ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್‌ಗಳು ಮತ್ತು ಹರಿಯಾಣ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಮೇಲ್ವಿಚಾರಣಾ ಜವಾಬ್ದಾರಿಗಳನ್ನು ವಹಿಸಿದೆ.

ಮಾಲೀನ್ಯ ಇನ್ನಷ್ಟು ಹೆಚ್ಚಾದಲ್ಲಿ ಉಸಿರಾಟದ ಸಮಸ್ಯೆ, ನಿರಂತರ ಕೆಮ್ಮು ಸೇರಿದಂತೆ ಇತರ ಸಮಸ್ಯೆಗಳು ಬಾಧಿಸುತ್ತವೆ. ಹೀಗಾಗಿ ಅಗತ್ಯಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ.

LEAVE A REPLY

Please enter your comment!
Please enter your name here

More like this

25°C ಕೆಳಗಿನ ತಾಪಮಾನ ಇರುವ ಪ್ರವಾಸಿ ತಾಣಗಳು: ಬೇಸಿಗೆಯಿಂದ ಪಾರಾಗಲು ಭಾರತೀಯರಿಗೆ...

ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಉಷ್ಣಾಂಶ ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆ, ತಂಪಾದ ವಾತಾವರಣದ ಪ್ರವಾಸಿ ತಾಣಗಳತ್ತ ಜನರು ಮುಖ ಮಾಡುತ್ತಿದ್ದಾರೆ. ಇತ್ತೀಚಿನ ವರದಿಗಳ...

ಗುಲ್ಮರ್ಗ್ ಅಥವಾ ಪಹಲ್ಗಾಮ್? ಕಾಶ್ಮೀರಕ್ಕೆ ಹೋಗುವ ಮುನ್ನ ಇದನ್ನು ಓದಿ

ಕಾಶ್ಮೀರಕ್ಕೆ ಹೋಗಬೇಕು ಎನ್ನುವುದು ಅನೇಕ ಜನರ ಕನಸು... ಹಿಮ ಮುಚ್ಚಿದ ಬೆಟ್ಟಗಳು, ಹಸಿರು ಕಣಿವೆಗಳು, ತಣ್ಣನೆಯ ಗಾಳಿ, ಕಣ್ಣು ತುಂಬುವ ದೃಶ್ಯಗಳು... ಇವೆಲ್ಲ ಒಂದೇ...

ಕೊಡಗು: ಪ್ರಕೃತಿ ರಮಣೀಯ ಮಂಜಿನ ಬೆಟ್ಟಗಳ ಹಿಂದೆ ಅಡಗಿದೆ ಒಂದು...

ಕೆಲವು ಸ್ಥಳಗಳು ಕೇವಲ ಪ್ರವಾಸಿ ತಾಣಗಳಾಗಿರುವುದಿಲ್ಲ… ಅವು ಕಥೆಗಳಾಗಿ ನಿಮ್ಮೊಳಗೆ ಉಳಿಯುತ್ತವೆ. ಅಂತಹ ಒಂದು ಸ್ಥಳವೇ ಕೊಡಗು! ನಾನು ಮೊದಲ ಬಾರಿ ಕೊಡಗಿನ ಮಂಜಿನ...