ಕನ್ನಡದಲ್ಲಿ ಮತ್ತೊಂದು ಪ್ರಾಮಿಸಿಂಗ್‌ ಸಿನಿಮಾ : ಟ್ರೇಲರ್‌ ಮೂಲಕ ಗಮನಸೆಳೆದ ʼಶಂಕರಾಭರಣʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಭಿನ್ನ ಕಥೆ ತೆರೆಯ ಮೇಲೆ ಬರೋದಕ್ಕೆ ತಯಾರಾಗಿದೆ. ನಟ ಶೈನ್‌ ಶೆಟ್ಟಿ ಅಭಿನಯದ ಶಂಕರಾಭರಣ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದ್ದು, ಭಾರೀ ಕುತೂಹಲ ಮೂಡಿಸಿದೆ.

ರಂಗಸ್ಥಳ ಸ್ಟುಡಿಯೋಸ್‌ ಲಾಂಛನದಲ್ಲಿ ಸಿನಿಮಾ ಮೂಡಿಬಂದಿದ್ದು, ಟ್ರೇಲರ್‌ ನೋಡಿ ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ರಹಸ್ಯವಾದ ರಸ್ತೆಯಲ್ಲಿ ಹೋಗುವ ಬಸ್ಸಿನ ಕಂಡಕ್ಟರ್‌ ಪಾತ್ರವನ್ನು ಶೈನ್‌ ಮಾಡುತ್ತಿದ್ದು, ಹಳ್ಳಿ ಕಥೆಗಳು, ದೆವ್ವದ ಕಾಟ, ನಿಗೂಢ ಘಟನೆಗಳ ಜೊತೆ ಹಾಸ್ಯ ಮಿಶ್ರಣವಾಗಿದೆ.

ಮಿಸ್ಟರಿ ಸೇತುವೆ ಇಲ್ಲಿ ಗಮನ ಸೆಳೆದಿದೆ. ಸಾಕಷ್ಟು ಫನ್ ಇದೆ ಎಂಬುದರ ಝಲಕ್ ಟ್ರೇಲರ್​​ನಲ್ಲಿ ಸಿಕ್ಕಿದೆ. ಚರಣ್ ರಾಜ್ ಅವರ ಹಿನ್ನೆಲೆ ಸಂಗೀತ ಹಾಗೂ ಉದಿತ್ ಖುರಾನಾ ಅವರ ಕ್ಯಾಮೆರಾ ಕೈಚಳಕ ಚಿತ್ರದ ಮಿಸ್ಟರಿ ಮೂಡನ್ನು ಅತ್ಯಂತ ಪರಿಣಾಮಕಾರಿಯಾಗಿ ತಂದಿದೆ. ಮೊದಲ ಬಾರಿಗೆ ಶೈನ್‌ ಶೆಟ್ಟಿ ನಿರ್ಮಾಪಕನಾಗಿ ಎಂಟ್ರಿ ಕೊಟ್ಟಿದ್ದಾರೆ. ನ್ಯಾಷನಲ್‌ ಅವಾರ್ಡ್‌ ವಿನ್ನಿಂಗ್‌ ಡೈರೆಕ್ಟರ್‌ ಸುಮಂತ್‌ ಭಟ್‌ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ಶೈನ್‌ ಶೆಟ್ಟಿ, ತನ್ವಿ ರಾಮ್‌, ಸಂಪತ್‌ ಕುಮಾರ್‌, ಕೃತಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ತಿಂಗಳ 20ನೇ ತಾರೀಖಿನಂದು ಸಿನಿಮಾ ರಿಲೀಸ್‌ ಆಗುತ್ತಿದ್ದು, ಈ ಸಿನಿಮಾ ಸು ಫ್ರಮ್‌ ಸೋ ರೀತಿ ಎಲ್ಲ ಆಡಿಯನ್ಸ್‌ಗಳನ್ನು ಮುಟ್ಟಲಿದ್ಯಾ? ಕಾದುನೋಡಬೇಕಿದೆ.

LEAVE A REPLY

Please enter your comment!
Please enter your name here

More like this

25°C ಕೆಳಗಿನ ತಾಪಮಾನ ಇರುವ ಪ್ರವಾಸಿ ತಾಣಗಳು: ಬೇಸಿಗೆಯಿಂದ ಪಾರಾಗಲು ಭಾರತೀಯರಿಗೆ...

ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಉಷ್ಣಾಂಶ ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆ, ತಂಪಾದ ವಾತಾವರಣದ ಪ್ರವಾಸಿ ತಾಣಗಳತ್ತ ಜನರು ಮುಖ ಮಾಡುತ್ತಿದ್ದಾರೆ. ಇತ್ತೀಚಿನ ವರದಿಗಳ...

ಗುಲ್ಮರ್ಗ್ ಅಥವಾ ಪಹಲ್ಗಾಮ್? ಕಾಶ್ಮೀರಕ್ಕೆ ಹೋಗುವ ಮುನ್ನ ಇದನ್ನು ಓದಿ

ಕಾಶ್ಮೀರಕ್ಕೆ ಹೋಗಬೇಕು ಎನ್ನುವುದು ಅನೇಕ ಜನರ ಕನಸು... ಹಿಮ ಮುಚ್ಚಿದ ಬೆಟ್ಟಗಳು, ಹಸಿರು ಕಣಿವೆಗಳು, ತಣ್ಣನೆಯ ಗಾಳಿ, ಕಣ್ಣು ತುಂಬುವ ದೃಶ್ಯಗಳು... ಇವೆಲ್ಲ ಒಂದೇ...

ಕೊಡಗು: ಪ್ರಕೃತಿ ರಮಣೀಯ ಮಂಜಿನ ಬೆಟ್ಟಗಳ ಹಿಂದೆ ಅಡಗಿದೆ ಒಂದು...

ಕೆಲವು ಸ್ಥಳಗಳು ಕೇವಲ ಪ್ರವಾಸಿ ತಾಣಗಳಾಗಿರುವುದಿಲ್ಲ… ಅವು ಕಥೆಗಳಾಗಿ ನಿಮ್ಮೊಳಗೆ ಉಳಿಯುತ್ತವೆ. ಅಂತಹ ಒಂದು ಸ್ಥಳವೇ ಕೊಡಗು! ನಾನು ಮೊದಲ ಬಾರಿ ಕೊಡಗಿನ ಮಂಜಿನ...