HomeNEWSಬೆಂಗಳೂರು-ಬೀದರ್, ಕಲಬುರಗಿ ವಿಶೇಷ ರೈಲು ಪ್ರತಿದಿನ ಸಂಚಾರ: ಮೇ 15ರಿಂದ ಹೊಸ ವೇಳಾಪಟ್ಟಿ

ಬೆಂಗಳೂರು-ಬೀದರ್, ಕಲಬುರಗಿ ವಿಶೇಷ ರೈಲು ಪ್ರತಿದಿನ ಸಂಚಾರ: ಮೇ 15ರಿಂದ ಹೊಸ ವೇಳಾಪಟ್ಟಿ

-

spot_img

ಬೆಂಗಳೂರು: ಬೆಂಗಳೂರು-ಬೀದರ್ ಹಾಗೂ ಬೆಂಗಳೂರು-ಕಲಬುರಗಿ ನಡುವಿನ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ವಿಸ್ತರಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ಪ್ರಯಾಣಿಕರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ರೈಲುಗಳ ಸಂಚಾರವನ್ನು ಹೆಚ್ಚಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಬೆಂಗಳೂರು-ಬೀದರ್ ನಡುವಿನ 16559 ಸಂಖ್ಯೆಯ ವಿಶೇಷ ರೈಲು ಮೇ 15ರಿಂದ ಪ್ರತಿ ಶುಕ್ರವಾರ ಮತ್ತು ಭಾನುವಾರ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ರಾತ್ರಿ 9.15ಕ್ಕೆ ಹೊರಡಲಿದ್ದು, ಮಾರನೇ ದಿನ ಮಧ್ಯಾಹ್ನ 12.15ಕ್ಕೆ ಬೀದರ್ ತಲುಪಲಿದೆ.

16560 ಸಂಖ್ಯೆಯ ಬೀದರ್-ಬೆಂಗಳೂರು ವಿಶೇಷ ರೈಲು ಮೇ 16ರಿಂದ ಪ್ರತಿ ಶನಿವಾರ ಮತ್ತು ಸೋಮವಾರ ಸಂಚರಿಸಲಿದೆ. ಈ ರೈಲು ಬೀದರ್‌ನಿಂದ ಹೊರಟು ಬೆಂಗಳೂರಿನ ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ.

ಇದೇ ವೇಳೆ ಬೆಂಗಳೂರು-ಕಲಬುರಗಿ ನಡುವಿನ 16563 ಸಂಖ್ಯೆಯ ವಿಶೇಷ ರೈಲು ಮೇ 16ರಿಂದ ಪ್ರತಿ ಶನಿವಾರ ಬೆಂಗಳೂರು ಕಂಟೊನ್ಮೆಂಟ್ ನಿಲ್ದಾಣದಿಂದ ಹೊರಡಲಿದೆ. 16564 ಸಂಖ್ಯೆಯ ಕಲಬುರಗಿ-ಬೆಂಗಳೂರು ರೈಲು ಮೇ 17ರಿಂದ ಕಲಬುರಗಿಯಿಂದ ಸಂಚಾರ ಆರಂಭಿಸಲಿದೆ. ಈ ವಿಶೇಷ ರೈಲುಗಳು ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂಟಕಲ್ಲು, ರಾಯಚೂರು ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಹೆಚ್ಚುವರಿ ಸಂಚಾರ ವ್ಯವಸ್ಥೆ ಮಾಡಲಾಗಿದ್ದು, ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ.

LEAVE A REPLY

Please enter your comment!
Please enter your name here

- Advertisment -spot_img