HomeNEWSಅಟ್ಲಾಂಟಿಕ್ ಸಾಗರದಲ್ಲಿ ಡಚ್ ಕ್ರೂಸ್ ನೌಕೆಯಲ್ಲಿ ಹಂಟಾವೈರಸ್ ಸೋಂಕು: 3 ಸಾವು, ಹಲವರು ಅಸ್ವಸ್ಥ

ಅಟ್ಲಾಂಟಿಕ್ ಸಾಗರದಲ್ಲಿ ಡಚ್ ಕ್ರೂಸ್ ನೌಕೆಯಲ್ಲಿ ಹಂಟಾವೈರಸ್ ಸೋಂಕು: 3 ಸಾವು, ಹಲವರು ಅಸ್ವಸ್ಥ

-

spot_img

ಕೇಪ್ ಟೌನ್ : ಅಟ್ಲಾಂಟಿಕ್ ಸಾಗರದಲ್ಲಿ ಕೇಪ್ ವರ್ಡ್ ಕರಾವಳಿಯ ಸಮೀಪ ಸಾಗುತ್ತಿದ್ದ ಡಚ್ ಕ್ರೂಸ್ ನೌಕೆಯಲ್ಲಿ ಅತಿವಿರಳ ಹಂಟಾವೈರಸ್ ಸೋಂಕು ಕಾಣಿಸಿಕೊಂಡಿದ್ದು, ಮೂವರು ಮೃತಪಟ್ಟಿದ್ದಾರೆ. ಕನಿಷ್ಠ ಮೂವರು ಗಂಭೀರವಾಗಿ ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 150 ಪ್ರಯಾಣಿಕರೊಂದಿಗೆ ಪ್ರಯಾಣಿಸುತ್ತಿದ್ದ ‘ಎಂವಿ ಹೊಂಡಿಯಸ್’ (MV Hondius) ನೌಕೆ ಅರ್ಜೆಂಟೀನಾದಿಂದ ಅಂಟಾರ್ಕ್ಟಿಕಾ ಹಾಗೂ ದಕ್ಷಿಣ ಅಟ್ಲಾಂಟಿಕ್ ದ್ವೀಪಗಳ ಪ್ರವಾಸದ ನಂತರ ಪಶ್ಚಿಮ ಆಫ್ರಿಕಾದ ಕೇಪ್ ವರ್ಡ್ ಪ್ರದೇಶಕ್ಕೆ ತಲುಪಿದೆ. ಈ ವೇಳೆ ನೌಕೆಯಲ್ಲಿ ಸೋಂಕು ಪ್ರಕರಣಗಳು ದೃಢಪಟ್ಟಿವೆ.

ಹಡಗಿನ ನಿರ್ವಾಹಕರು ಹಾಗೂ ವಿಶ್ವ ಆರೋಗ್ಯ ಸಂಸ್ಥೆ (WHO) ಮಾಹಿತಿ ನೀಡಿರುವಂತೆ, ನೌಕೆ ಪ್ರಸ್ತುತ ತುರ್ತು ಸಹಾಯಕ್ಕಾಗಿ ಕಾಯುತ್ತಿದೆ. ಸ್ಥಳೀಯ ಆರೋಗ್ಯ ಅಧಿಕಾರಿಗಳು ಪರಿಸ್ಥಿತಿಯನ್ನು ನಿಗಾ ವಹಿಸಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಹಂಟಾವೈರಸ್ ಅಪರೂಪದ ಆದರೆ ಗಂಭೀರ ವೈರಲ್ ಸೋಂಕಾಗಿದ್ದು, ಸಾಮಾನ್ಯವಾಗಿ ಇಲಿ ವರ್ಗದ ಪ್ರಾಣಿಗಳ ಮೂಲಕ ಮಾನವರಿಗೆ ಹರಡುತ್ತದೆ. ಸೋಂಕು ತಗುಲಿದವರಿಗೆ ಜ್ವರ, ಉಸಿರಾಟದ ತೊಂದರೆ ಸೇರಿದಂತೆ ತೀವ್ರ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ನೌಕೆಯಲ್ಲಿರುವ ಪ್ರಯಾಣಿಕರು ಮತ್ತು ಸಿಬ್ಬಂದಿಯ ಆರೋಗ್ಯವನ್ನು ಸಮೀಪದಿಂದಲೇ ಪರಿಶೀಲಿಸಲಾಗುತ್ತಿದ್ದು, ಸೋಂಕು ಮತ್ತಷ್ಟು ಹರಡುವುದನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

LEAVE A REPLY

Please enter your comment!
Please enter your name here

- Advertisment -spot_img