ಮೊದಲು ChatGPT ಬಂತು.
ಪ್ರಶ್ನೆ ಕೇಳಿದರೆ ಉತ್ತರ ಕೊಡುತ್ತಿತ್ತು. ಆದರೆ ಈಗ ತಂತ್ರಜ್ಞಾನ ಮತ್ತೊಂದು ಹಂತಕ್ಕೆ ಹೋಗುತ್ತಿದೆ — AI Agents.
ಇವು ಕೇವಲ ಉತ್ತರ ಕೊಡುವುದಲ್ಲ… ನಿಮ್ಮ ಪರವಾಗಿ ಕೆಲಸವೂ ಮಾಡುತ್ತವೆ. Mail ಕಳುಹಿಸಬಹುದು. Meeting fix ಮಾಡಬಹುದು. Data analysis ಮಾಡಬಹುದು. Coding ಕೂಡ ಮಾಡಬಹುದು. ಇದರಿಂದಲೇ ಜಗತ್ತಿನಲ್ಲಿ ಹೊಸ ಭಯ ಶುರುವಾಗಿದೆ. “ಮುಂದೆ ಮನುಷ್ಯರ ಅಗತ್ಯವೇ ಕಡಿಮೆಯಾಗುತ್ತದೆಯಾ?”
AI Agent ಅಂದ್ರೇನು?
ಇದು ಒಂದು digital employee ತರಹ. ನೀವು task ಕೊಟ್ಟರೆ step-by-step ಆಗಿ ಅದನ್ನು ಮುಗಿಸಲು ಪ್ರಯತ್ನಿಸುತ್ತದೆ.
ಉದಾಹರಣೆಗೆ: “Cheap flight book ಮಾಡಿ” ಅಂದ್ರೆ ಅದು websites search ಮಾಡಿ ticket compare ಮಾಡಿ booking ಕೂಡ ಮಾಡಬಹುದು.
ಆದರೆ ಸಮಸ್ಯೆ?
AI ಇನ್ನೂ ತಪ್ಪು ಮಾಡುತ್ತದೆ. ಕೆಲವೊಮ್ಮೆ ತಪ್ಪು ಮಾಹಿತಿ ಕೊಡುತ್ತದೆ. ವಿಚಿತ್ರ ನಿರ್ಧಾರ ತೆಗೆದುಕೊಳ್ಳುತ್ತದೆ. ಹೀಗಾಗಿ ಸಂಪೂರ್ಣವಾಗಿ ಮನುಷ್ಯರನ್ನು replace ಮಾಡಲು ಇನ್ನೂ ಸಮಯ ಬೇಕು.



