HomeINDIAಕೇರಳದಲ್ಲಿ ಜನಪ್ರಿಯ ಮದ್ಯ ಬ್ರ್ಯಾಂಡ್‌ಗಳ ಬೆಲೆ ಇಳಿಕೆ: ಮಾರಾಟ ಮಳಿಗೆಗಳಿಗೆ ಪರಿಷ್ಕೃತ ದರಗಳ ಪಟ್ಟಿ ರವಾನೆ

ಕೇರಳದಲ್ಲಿ ಜನಪ್ರಿಯ ಮದ್ಯ ಬ್ರ್ಯಾಂಡ್‌ಗಳ ಬೆಲೆ ಇಳಿಕೆ: ಮಾರಾಟ ಮಳಿಗೆಗಳಿಗೆ ಪರಿಷ್ಕೃತ ದರಗಳ ಪಟ್ಟಿ ರವಾನೆ

-

spot_img

ಕೇರಳದಲ್ಲಿ ಜನಪ್ರಿಯ ಮದ್ಯ ಬ್ರ್ಯಾಂಡ್‌ಗಳ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ. ಓಲ್ಡ್ ಮಾಂಕ್, ಆಫೀಸರ್ಸ್ ಚಾಯ್ಸ್ ಹಾಗೂ ಲೆ ಮೌಂಟ್ ರಮ್ ಸೇರಿದಂತೆ ಕೆಲವು ಪ್ರಮುಖ ಬ್ರ್ಯಾಂಡ್‌ಗಳ ದರ ಕಡಿತಗೊಂಡಿದೆ.

ಮಾಹಿತಿಯ ಪ್ರಕಾರ, ವಿವಿಧ ಬ್ರ್ಯಾಂಡ್‌ಗಳ ಬೆಲೆಯಲ್ಲಿ 10 ರೂಪಾಯಿಯಿಂದ 50 ರೂಪಾಯಿವರೆಗೆ ಇಳಿಕೆ ಮಾಡಲಾಗಿದೆ. ಆದರೆ ಎಲ್ಲಾ ಮದ್ಯ ಬ್ರ್ಯಾಂಡ್‌ಗಳಿಗೆ ಈ ದರ ಇಳಿಕೆ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿದೆ.

ಹೊಸ ದರಗಳು ಇಂದಿನಿಂದಲೇ ಜಾರಿಗೆ ಬಂದಿದ್ದು, ಕೆಲವು ಬ್ರ್ಯಾಂಡ್‌ಗಳ ಬೆಲೆ 30 ರಿಂದ 50 ರೂಪಾಯಿವರೆಗೆ ಇಳಿಕೆಯಾಗಿದೆ ಎನ್ನಲಾಗಿದೆ.

ಬಿವರೇಜ್ ಕಾರ್ಪೋರೇಶನ್ ವತಿಯಿಂದ ಪರಿಷ್ಕೃತ ದರಗಳ ಸೂಚನೆಗಳನ್ನು ಮದ್ಯ ಮಾರಾಟ ಮಳಿಗೆಗಳಿಗೆ ಕಳುಹಿಸಲಾಗಿದೆ. ಹೊಸ ದರಗಳನ್ನು ಸಾಫ್ಟ್‌ವೇರ್ ವ್ಯವಸ್ಥೆಯಲ್ಲೂ ನವೀಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮದ್ಯ ಉತ್ಪಾದನಾ ಕಂಪನಿಗಳ ಸೂಚನೆಯ ಮೇರೆಗೆ ಬೆಲೆ ಇಳಿಕೆ ಮಾಡಲಾಗಿದೆ ಎಂದು ಬಿವರೇಜ್ ನಿಗಮ ಸ್ಪಷ್ಟಪಡಿಸಿದೆ.

LEAVE A REPLY

Please enter your comment!
Please enter your name here

- Advertisment -spot_img