HomeINDIAಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ ಟಿಕೆಟ್‌ನಲ್ಲಿ ಹೊಸ ಬದಲಾವಣೆ… ಇನ್ನು ‘Gender Entry’...

ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ ಟಿಕೆಟ್‌ನಲ್ಲಿ ಹೊಸ ಬದಲಾವಣೆ… ಇನ್ನು ‘Gender Entry’ ಕಡ್ಡಾಯ!

-

spot_img

ತಿರುವನಂತಪುರಂ: ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಬಸ್ ಪ್ರಯಾಣಿಕರ ಟಿಕೆಟ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಜಾರಿಗೆ ತಂದಿದೆ. ಶನಿವಾರದಿಂದ ಬಸ್‌ಗಳಲ್ಲಿ ನೀಡುವ ಟಿಕೆಟ್‌ಗಳಲ್ಲಿ ಪ್ರಯಾಣಿಕರ ಲಿಂಗ ವಿವರವನ್ನು ಕಡ್ಡಾಯವಾಗಿ ದಾಖಲಿಸುವ ಹೊಸ ವ್ಯವಸ್ಥೆ ಆರಂಭವಾಗಿದೆ.

ಹೊಸ ನಿಯಮದ ಪ್ರಕಾರ, ಕಂಡಕ್ಟರ್‌ಗಳು ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರ (ETM) ಮೂಲಕ ಟಿಕೆಟ್ ನೀಡುವಾಗ ಪ್ರಯಾಣಿಕರನ್ನು “ಪುರುಷ” ಅಥವಾ “ಮಹಿಳೆ” ಎಂದು ಸರಿಯಾಗಿ ನಮೂದಿಸಬೇಕಾಗಿದೆ.

ಈ ಉದ್ದೇಶಕ್ಕಾಗಿ ETM ಸಾಫ್ಟ್‌ವೇರ್‌ನಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದ್ದು, ಪ್ರತಿಯೊಂದು ಟಿಕೆಟ್ ವಿತರಣೆಯಲ್ಲೂ gender entry ಸರಿಯಾಗಿ ಸೇರಿಸಿರುವುದನ್ನು ಖಚಿತಪಡಿಸಿಕೊಳ್ಳಲು KSRTC ನಿರ್ದೇಶನ ನೀಡಿದೆ.

ಈ ಕುರಿತು KSRTC ಐಟಿ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ನಿಶಾಂತ್ ಎಸ್ ಆದೇಶ ಹೊರಡಿಸಿದ್ದು, ಎಲ್ಲಾ ಡಿಪೋಗಳಲ್ಲಿ ಹೊಸ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಘಟಕ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಪ್ರಯಾಣಿಕರ ಡೇಟಾ ನಿರ್ವಹಣೆ, ಮಹಿಳಾ ಪ್ರಯಾಣಿಕರ ಸಂಖ್ಯೆ ವಿಶ್ಲೇಷಣೆ ಹಾಗೂ ಭವಿಷ್ಯದ ಸಾರಿಗೆ ಯೋಜನೆಗಳಿಗೆ ಈ ಮಾಹಿತಿ ಸಹಾಯಕವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಆದರೆ ಈ ಹೊಸ ಕ್ರಮದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯೂ ಆರಂಭವಾಗಿದೆ. ಕೆಲವರು ಇದನ್ನು ಡೇಟಾ ಸಂಗ್ರಹಣೆಗೆ ಉಪಯುಕ್ತ ಕ್ರಮ ಎಂದು ಬೆಂಬಲಿಸಿದರೆ, ಇನ್ನೂ ಕೆಲವರು “ಲಿಂಗ ಆಯ್ಕೆ ಕೇವಲ ಎರಡು ಮಾತ್ರವೇ?” ಎಂದು ಪ್ರಶ್ನೆ ಎತ್ತಿದ್ದಾರೆ.

LEAVE A REPLY

Please enter your comment!
Please enter your name here

- Advertisment -spot_img