ಕಂಪ್ಯೂಟರ್ ಯುಗವನ್ನು ಹಿಂದಿಕ್ಕಿ ಈಗ Artificial Intelligence ಅಂದರೆ AI ಯುಗ ಆರಂಭವಾಗಿದೆ. ಈಗಾಗಲೇ ಮೊಬೈಲ್, ಬ್ಯಾಂಕಿಂಗ್, ವೈದ್ಯಕೀಯ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಎಐ ಪ್ರಭಾವ ಹೆಚ್ಚುತ್ತಿರುವ ನಡುವೆ, ಇದೀಗ YouTube ಕೂಡ AI ಆಧಾರಿತ ಹೊಸ ವೈಶಿಷ್ಟ್ಯ ತರಲು ಮುಂದಾಗಿದೆ. ಬಳಕೆದಾರರ ಸರ್ಚ್ ಅನುಭವವನ್ನು ಮತ್ತಷ್ಟು ಸುಲಭಗೊಳಿಸಲು YouTube “Ask YouTube” ಎಂಬ AI ಚಾಲಿತ ಸಂವಾದಾತ್ಮಕ ಸರ್ಚ್ ಟೂಲ್ ಅನ್ನು ಪರೀಕ್ಷಿಸುತ್ತಿದೆ!
ಏನು ಈ Ask YouTube?
ಇದುವರೆಗೆ YouTubeನಲ್ಲಿ ವಿಡಿಯೋ ಹುಡುಕಲು ಕೀವರ್ಡ್ ಟೈಪ್ ಮಾಡಬೇಕಾಗುತ್ತಿತ್ತು. ಆದರೆ ಹೊಸ AI ಫೀಚರ್‌ನಲ್ಲಿ ಬಳಕೆದಾರರು ಸಾಮಾನ್ಯ ಮಾತಿನ ಭಾಷೆಯಲ್ಲೇ ಪ್ರಶ್ನೆ ಕೇಳಬಹುದು. ಉದಾಹರಣೆಗೆ: “3 ದಿನಗಳ ರಸ್ತೆ ಪ್ರಯಾಣಕ್ಕೆ best plan”, “ಮನೆಯ decoration ideas”, “French Omelette ಹೇಗೆ ಮಾಡುವುದು?”… ಹೀಗೆ ಪ್ರಶ್ನೆ ಕೇಳಿದರೆ AI ಅದರ ಅರ್ಥ ತಿಳಿದು ಸಂಬಂಧಿತ ವಿಡಿಯೋ, ಸಣ್ಣ ಕ್ಲಿಪ್ ಮತ್ತು ಪಠ್ಯ ಸಾರಾಂಶಗಳನ್ನು ತೋರಿಸಲಿದೆ.
ChatGPT ತರಹ ಅನುಭವ!
ಈ ಫೀಚರ್‌ನ ವಿಶೇಷತೆ ಎಂದರೆ ಇದು ಕೇವಲ Search ಅಲ್ಲ… Conversation ರೀತಿಯಲ್ಲಿ ಕೆಲಸ ಮಾಡಲಿದೆ. ಒಂದು ಪ್ರಶ್ನೆಗೆ ಸರಿಯಾದ ವಿಡಿಯೋ ಸಿಗದಿದ್ದರೆ, ಮುಂದಿನ ಪ್ರಶ್ನೆಗಳನ್ನು ಕೇಳಿ ಹುಡುಕಾಟ ಮುಂದುವರಿಸಬಹುದು. ಅಂದರೆ YouTubeನಲ್ಲಿ ಯಾರೊಂದಿಗೋ ಮಾತನಾಡುವ ರೀತಿಯ ಅನುಭವ ಸಿಗಲಿದೆ.
ಯಾರಿಗೆ ಸಿಗಲಿದೆ ಈ ಫೀಚರ್?
ಪ್ರಸ್ತುತ ಈ ಹೊಸ AI ಟೂಲ್ YouTube Labsನಲ್ಲಿ ಪರೀಕ್ಷೆ ಹಂತದಲ್ಲಿದ್ದು, ಅಮೆರಿಕಾದಲ್ಲಿರುವ ಕೆಲ Premium subscribersಗೆ ಮಾತ್ರ ಲಭ್ಯವಾಗಿದೆ. ಜೂನ್ 8, 2026ರವರೆಗೆ ಇದರ ಟೆಸ್ಟಿಂಗ್ ನಡೆಯಲಿದ್ದು, ಬಳಕೆದಾರರ ಪ್ರತಿಕ್ರಿಯೆ ಆಧರಿಸಿ ಮುಂದಿನ ದಿನಗಳಲ್ಲಿ ಎಲ್ಲರಿಗೂ ಬಿಡುಗಡೆ ಮಾಡುವ ಸಾಧ್ಯತೆ ಇದೆ.
YouTubeನಲ್ಲಿ ಇನ್ನೂ ಹಲವು AI ಪ್ರಯೋಗಗಳು
Ask YouTube ಜೊತೆಗೆ YouTube ಇನ್ನೂ ಕೆಲವು AI ಫೀಚರ್‌ಗಳ ಮೇಲೂ ಕೆಲಸ ಮಾಡುತ್ತಿದೆ. Beyond The Beat (YouTube Musicನಲ್ಲಿ ಹಾಡು ಕೇಳುವಾಗ AI-generated insights ನೀಡುವ ವ್ಯವಸ್ಥೆ.), VibeCheck (YouTube Shorts upload ಮಾಡುವ ಮುನ್ನ AI coaching tips ನೀಡುವ ವೈಶಿಷ್ಟ್ಯ).
AI Search ವ್ಯವಸ್ಥೆ ಬಂದ ಬಳಿಕ YouTubeನಲ್ಲಿ ವಿಡಿಯೋ ಹುಡುಕುವ ವಿಧಾನವೇ ಸಂಪೂರ್ಣ ಬದಲಾಗಬಹುದು ಎಂದು ಟೆಕ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭವಿಷ್ಯದಲ್ಲಿ ಕೀವರ್ಡ್ ಟೈಪ್ ಮಾಡುವ ಕಾಲ ಕಡಿಮೆಯಾಗಬಹುದು… ಬದಲಿಗೆ “ಮಾತನಾಡಿ ಹುಡುಕುವ” ಯುಗ ಆರಂಭವಾಗಬಹುದು ಎನ್ನಲಾಗುತ್ತಿದೆ.



