22 ವರ್ಷ ಹಳೆಯ ನಾಸಾ ಉಪಗ್ರಹ ಇಂದು ಭೂಮಿಗೆ ವಾಪಸ್ : ಬೆಂಗಳೂರಿನ ಮೇಲೆ ಅವಶೇಷ ಬೀಳುವ ಸಾಧ್ಯತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬರೋಬ್ಬರಿ 22 ವರ್ಷಗಳ ಹಳೆಯ ನಾಸಾ ಉಪಗ್ರಹವೊಂದು ಇಂದು ಭೂಮಿಗೆ ವಾಪಾಸಾಗಲಿದ್ದು, ಇದರ ಅವಶೇಷಗಳು ಬೆಂಗಳೂರಿನ ಮೇಲೆ ಬೀಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ನೀಲ್‌ ಗೆಹ್ರೆಲ್ಸ್‌ ಸ್ಟಿಫ್ಟ್‌ ಅಬ್ಸರ್‌ವೇಟರಿ ಹೆಸರಿನ ಉಪ್ರಗಹ ಭೂಮಿಗೆ ವಾಪಾಸಾಗುತ್ತಿದ್ದು, ಈ ವೇಳೆ ಇದರ ಅವಶೇಷಗಳು ಬೀಳುತ್ತವೆ. ಇದು ಎಲ್ಲಿ ಬೀಳುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಾಗಿಲ್ಲ. ಆದರೆ ನಾಸಾ ಸಂಭಾವ್ಯ ವಲಯಗಳ ಪಟ್ಟಿಯನ್ನು ಮಾಡಿದ್ದು, ಇದರಲ್ಲಿ ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೆಸರಿದೆ.

ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಉಪಗ್ರಹವು ಭೂಮಿಗೆ ಪ್ರವೇಶ ಮಾಡಲಿದೆ. ಈ ವೇಳೆ ಉಂಟಾಗುವ ತೀವ್ರ ಶಾಖದಿಂದಾಗಿ ಉಪಗ್ರಹದ ಅನೇಕ ಭಾಗಗಳು ಸುಟ್ಟುಹೋಗುತ್ತವೆ. ಆದರೆ ಉಪಗ್ರಹದ ಕೆಲ ಗಟ್ಟಿ ಭಾಗಗಳು ಭೂಮಿಯ ಮೇಲ್ಮೈ ತಲುಪುವ ಸಾಧ್ಯತೆ ಇದೆ. https://twitter.com/BoDeepest/status/2117792273257697441

ಎಲ್ಲಿ ಬೀಳಬಹುದು?

ಉಪಗ್ರಹದ ಅವಶೇಷಗಳು ಎಲ್ಲಿ ಬೀಳುತ್ತವೆ ಎಂದು ಒಂದು ಜಾಗವನ್ನು ಹೇಳುವುದು ಅಸಾಧ್ಯವಾಗಿದೆ. ಆದರೆ ನಾಸಾ ಸಂಭಾವ್ಯ ಪಟ್ಟಿಯನ್ನು ಗುರುತಿಸಿದ್ದು, ಆಫ್ರಿಕಾ, ಆಸ್ಟ್ರೇಲಿಯಾ, ಭಾರತ, ಆಗ್ನೇಯ ಏಷ್ಯಾ ಹಾಗೂ ಮಧ್ಯ ಮತ್ತು ದಕ್ಷಿಣ ಅಮೆರಿಕದ ಕೆಲವು ಭಾಗಗಳಿವೆ. ಇನ್ನು ಭಾರತದ ಬೆಂಗಳೂರು, ಮುಂಬೈ, ಹೈದರಾಬಾದ್‌ ಹಾಗೂ ಚೆನ್ನೈ ನಗರಗಳ ಹೆಸರು ಪಟ್ಟಿಯಲ್ಲಿದೆ. ನಿಖರ ಸ್ಥಳ ಗೊತ್ತಾಗದಿದ್ದರೂ ಹೆಚ್ಚಿನ ಅವಶೇಷಗಳು ಜನವಸತಿಯಿಲ್ಲದ ಸಮುದ್ರ ಪ್ರದೇಶಗಳಿಗೆ ಬೀಳುವ ಸಾಧ್ಯತೆ ದಟ್ಟವಾಗಿದೆ.

ನೀಲ್ ಗೆಹ್ರೆಲ್ಸ್ ಸ್ವಿಫ್ಟ್ ಅಬ್ಸರ್ವೇಟರಿಯನ್ನು 2004ರ ನವೆಂಬರ್ 20ರಂದು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಾಗಿತ್ತು. ಆರಂಭದಲ್ಲಿ ಕೇವಲ ಎರಡು ವರ್ಷಗಳ ಕಾರ್ಯಾಚರಣೆಗಾಗಿ ವಿನ್ಯಾಸಗೊಳಿಸಲಾಗಿದ್ದ ಈ ಉಪಗ್ರಹ ಬರೋಬ್ಬರಿ 22 ವರ್ಷಗಳ ಕಾಲ ಕಾರ್ಯನಿರ್ವಹಿಸಿದೆ.

LEAVE A REPLY

Please enter your comment!
Please enter your name here

More like this

25°C ಕೆಳಗಿನ ತಾಪಮಾನ ಇರುವ ಪ್ರವಾಸಿ ತಾಣಗಳು: ಬೇಸಿಗೆಯಿಂದ ಪಾರಾಗಲು ಭಾರತೀಯರಿಗೆ...

ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಉಷ್ಣಾಂಶ ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆ, ತಂಪಾದ ವಾತಾವರಣದ ಪ್ರವಾಸಿ ತಾಣಗಳತ್ತ ಜನರು ಮುಖ ಮಾಡುತ್ತಿದ್ದಾರೆ. ಇತ್ತೀಚಿನ ವರದಿಗಳ...

ಗುಲ್ಮರ್ಗ್ ಅಥವಾ ಪಹಲ್ಗಾಮ್? ಕಾಶ್ಮೀರಕ್ಕೆ ಹೋಗುವ ಮುನ್ನ ಇದನ್ನು ಓದಿ

ಕಾಶ್ಮೀರಕ್ಕೆ ಹೋಗಬೇಕು ಎನ್ನುವುದು ಅನೇಕ ಜನರ ಕನಸು... ಹಿಮ ಮುಚ್ಚಿದ ಬೆಟ್ಟಗಳು, ಹಸಿರು ಕಣಿವೆಗಳು, ತಣ್ಣನೆಯ ಗಾಳಿ, ಕಣ್ಣು ತುಂಬುವ ದೃಶ್ಯಗಳು... ಇವೆಲ್ಲ ಒಂದೇ...

ಕೊಡಗು: ಪ್ರಕೃತಿ ರಮಣೀಯ ಮಂಜಿನ ಬೆಟ್ಟಗಳ ಹಿಂದೆ ಅಡಗಿದೆ ಒಂದು...

ಕೆಲವು ಸ್ಥಳಗಳು ಕೇವಲ ಪ್ರವಾಸಿ ತಾಣಗಳಾಗಿರುವುದಿಲ್ಲ… ಅವು ಕಥೆಗಳಾಗಿ ನಿಮ್ಮೊಳಗೆ ಉಳಿಯುತ್ತವೆ. ಅಂತಹ ಒಂದು ಸ್ಥಳವೇ ಕೊಡಗು! ನಾನು ಮೊದಲ ಬಾರಿ ಕೊಡಗಿನ ಮಂಜಿನ...