ನವದೆಹಲಿ: “Googleನಲ್ಲಿ Search ಮಾಡುವುದು” ಎನ್ನುವುದು ಈಗ ನಿಧಾನವಾಗಿ ಸಂಪೂರ್ಣ ಹೊಸ ಅನುಭವವಾಗಿ ಬದಲಾಗುತ್ತಿದೆ.
AI ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆ, Google ತನ್ನ Search ವ್ಯವಸ್ಥೆಯಲ್ಲಿ ಮತ್ತೊಂದು ದೊಡ್ಡ ಬದಲಾವಣೆಗೆ ಮುಂದಾಗಿದೆ. ಈ ಹೊಸ ಅಪ್ಡೇಟ್‌ನಲ್ಲಿ Search Bar itself ಹೆಚ್ಚು intelligent ಆಗಲಿದ್ದು, ಬಳಕೆದಾರರ ಪ್ರಶ್ನೆಗಳನ್ನು ಇನ್ನಷ್ಟು natural ರೀತಿಯಲ್ಲಿ ಅರ್ಥಮಾಡಿಕೊಳ್ಳುವ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುತ್ತಿದೆ.
Search Bar ಈಗ ಕೇವಲ Search Box ಅಲ್ಲ!
ಒಮ್ಮೆ Google Search ಎಂದರೆ ಒಂದು ಪದ ಟೈಪ್ ಮಾಡುವುದು, Enter ಒತ್ತುವುದು, Links ನೋಡುವುದು, ಅಷ್ಟೇ ಆಗಿತ್ತು.
ಆದರೆ ಈಗ Search Bar ಪ್ರಶ್ನೆ ಅರ್ಥಮಾಡಿಕೊಳ್ಳುತ್ತದೆ, Suggestion ಕೊಡುತ್ತದೆ, Follow-up ಪ್ರಶ್ನೆ ಕೇಳಲು ಅವಕಾಶ ಕೊಡುತ್ತದೆ, AI ಮೂಲಕ ನೇರ ಉತ್ತರ ನೀಡುತ್ತದೆ ಎಂಬ ಹೊಸ ಅನುಭವದತ್ತ ಸಾಗುತ್ತಿದೆ.
“Typing”ಗಿಂತ “Conversation” ಹೆಚ್ಚು
ಹೊಸ AI Search ಅನುಭವದಲ್ಲಿ ಬಳಕೆದಾರರು Google ಜೊತೆ ಮಾತಾಡುವಂತೆ Search ಮಾಡಬಹುದಾಗಿದೆ. ಉದಾಹರಣೆಗೆ “Best place for weekend trip near Bengaluru with less crowd and good weather” ಹೀಗೆ ದೊಡ್ಡ ಪ್ರಶ್ನೆಗಳನ್ನೂ Google ಅರ್ಥಮಾಡಿಕೊಳ್ಳುವ ಮಟ್ಟಕ್ಕೆ Search ವ್ಯವಸ್ಥೆ ಬೆಳೆಯುತ್ತಿದೆ.
Search ಫಲಿತಾಂಶವೂ ಬದಲಾಗುತ್ತಿದೆ. ಹಳೆಯ ರೀತಿಯ Blue Links ಮಾದರಿ ನಿಧಾನವಾಗಿ ಕಡಿಮೆಯಾಗುತ್ತಿದ್ದು, AI-generated summaries ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಇದರಿಂದ ಬಳಕೆದಾರರಿಗೆ ತ್ವರಿತ ಮಾಹಿತಿ ಸಿಗುತ್ತಿದೆಯಾದರೂ, Website traffic ಮೇಲೆ ಪರಿಣಾಮ ಬೀರುವ ಆತಂಕವೂ ಹೆಚ್ಚುತ್ತಿದೆ.
Content Creatorsಗೆ ಹೊಸ ಸವಾಲು?
ಈ ಬದಲಾವಣೆ Bloggers, News websites, SEO creators, Digital publishersಗೆ ದೊಡ್ಡ ಬದಲಾವಣೆ ತರಬಹುದು ಎನ್ನಲಾಗುತ್ತಿದೆ. ಯಾಕೆಂದರೆ ಬಳಕೆದಾರರು website ತೆರೆಯದೇ Googleಲ್ಲೇ ಉತ್ತರ ಪಡೆಯುವ ಸಾಧ್ಯತೆ ಹೆಚ್ಚುತ್ತಿದೆ. ಹೊಸ ಅಪ್ಡೇಟ್‌ನಲ್ಲಿ Voice Search ಮತ್ತು conversational AIಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಭವಿಷ್ಯದಲ್ಲಿ ಜನರು Search ಟೈಪ್ ಮಾಡುವುದಕ್ಕಿಂತ ಮಾತನಾಡುವ ಪ್ರಮಾಣ ಹೆಚ್ಚಬಹುದು ಎನ್ನಲಾಗುತ್ತಿದೆ.
“Google ಈಗ Search Engine ಮಾತ್ರವಲ್ಲ”
Tech ವಲಯದ ಪ್ರಕಾರ, Google ಈಗ AI Assistant, Information Guide, Digital Companion, ಆಗಿ ರೂಪಾಂತರಗೊಳ್ಳುತ್ತಿದೆ. AI ಆಧಾರಿತ Search ಹೆಚ್ಚಾದಂತೆ User data, Personal preferences, Search behaviour tracking, ಬಗ್ಗೆ privacy ಚರ್ಚೆಯೂ ಜೋರಾಗಿದೆ.
Internet ಬಳಕೆ ಸಂಪೂರ್ಣ ಬದಲಾಗುತ್ತದೆಯಾ?
ತಜ್ಞರ ಪ್ರಕಾರ, ಮುಂದಿನ ಕೆಲವು ವರ್ಷಗಳಲ್ಲಿ ಜನರು Internet ಬಳಸುವ ವಿಧಾನವೇ ಬದಲಾಗಬಹುದು. “Website visit”ಗಿಂತ “AI answer” ಮೇಲೆ ಅವಲಂಬನೆ ಹೆಚ್ಚುವ ಸಾಧ್ಯತೆ ಇದೆ. ಒಮ್ಮೆ ಕೇವಲ ಮಾಹಿತಿ ಹುಡುಕಲು ಬಳಸುತ್ತಿದ್ದ Google Search ಈಗ ಮಾನವನಂತೆ ಪ್ರತಿಕ್ರಿಯಿಸುವ ಹೊಸ ಯುಗಕ್ಕೆ ಕಾಲಿಡುತ್ತಿದೆ. ಈ ಬದಲಾವಣೆ Internet ಲೋಕವನ್ನು ಹೇಗೆ ರೂಪಿಸುತ್ತದೆ ಎಂಬುದನ್ನು ಮುಂದಿನ ವರ್ಷಗಳು ನಿರ್ಧರಿಸಲಿವೆ.


