HomeWORLDಸ್ಪೇನ್ ದ್ವೀಪಕ್ಕೆ ತಲುಪಿದ ಕ್ರೂಸ್ ಹಡಗು: ನಿವಾಸಿಗಳಿಗೆ ಹಂಟಾವೈರಸ್ ಆತಂಕ ಬೇಡ ಎಂದ WHO

ಸ್ಪೇನ್ ದ್ವೀಪಕ್ಕೆ ತಲುಪಿದ ಕ್ರೂಸ್ ಹಡಗು: ನಿವಾಸಿಗಳಿಗೆ ಹಂಟಾವೈರಸ್ ಆತಂಕ ಬೇಡ ಎಂದ WHO

-

spot_img

ಸ್ಪೇನ್‌ನ ಟೆನೆರಿಫ್ ದ್ವೀಪಕ್ಕೆ ಹಂಟಾವೈರಸ್ ಸೋಂಕು ಪತ್ತೆಯಾದ MV Hondius ಕ್ರೂಸ್ ಹಡಗು ಭಾನುವಾರ ತಲುಪಿದೆ. ಹಡಗಿನಲ್ಲಿ ಸೋಂಕು ಹರಡಿದ ಹಿನ್ನೆಲೆ ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿದ್ದರೂ, ಸಾರ್ವಜನಿಕರಿಗೆ ಅಪಾಯ ಕಡಿಮೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಸ್ಪಷ್ಟಪಡಿಸಿದೆ.

140ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಈ ಡಚ್ ಹಡಗಿನಲ್ಲಿ ಈಗಾಗಲೇ ಹಲವರಿಗೆ ಸೋಂಕು ದೃಢಪಟ್ಟಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಸೋಂಕಿನ ಭೀತಿ ಹಿನ್ನೆಲೆ ಟೆನೆರಿಫ್‌ನಲ್ಲಿ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳೊಂದಿಗೆ ಪ್ರಯಾಣಿಕರನ್ನು ಪ್ರತ್ಯೇಕವಾಗಿ ಇಳಿಸುವ ಕಾರ್ಯ ಆರಂಭಿಸಲಾಗಿದೆ.

WHO ಮಹಾನಿರ್ದೇಶಕ Tedros Adhanom Ghebreyesus ಟೆನೆರಿಫ್‌ಗೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳಿಗೆ ಧೈರ್ಯ ತುಂಬಿದ್ದಾರೆ. “ಇದು ಮತ್ತೊಂದು ಕೋವಿಡ್ ಅಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದು, ಹಂಟಾವೈರಸ್ ಸಾಮಾನ್ಯವಾಗಿ ಇಲಿ ಮತ್ತು ಕೀಟಗಳಿಂದ ಹರಡುತ್ತದೆ, ಮಾನವನಿಂದ ಮಾನವನಿಗೆ ಹರಡುವ ಸಂಭವ ಅತ್ಯಂತ ವಿರಳ ಎಂದು ತಿಳಿಸಿದ್ದಾರೆ.

ಸ್ಪೇನ್ ಆರೋಗ್ಯ ಇಲಾಖೆ ಪ್ರಯಾಣಿಕರನ್ನು ಪ್ರತ್ಯೇಕ ಬೋಟ್‌ಗಳ ಮೂಲಕ ಕರಾವಳಿಗೆ ಕರೆತಂದು ಆರೋಗ್ಯ ತಪಾಸಣೆ ನಡೆಸುತ್ತಿದೆ. ಬಳಿಕ ಅವರನ್ನು ಅವರ ದೇಶಗಳಿಗೆ ವಿಶೇಷ ವಿಮಾನಗಳ ಮೂಲಕ ಕಳುಹಿಸುವ ಯೋಜನೆ ರೂಪಿಸಲಾಗಿದೆ. ಕೆಲವು ಪ್ರಯಾಣಿಕರನ್ನು ಕ್ವಾರಂಟೈನ್‌ನಲ್ಲೂ ಇರಿಸಲಾಗುತ್ತಿದೆ.

ಈ ಹಡಗು ಏಪ್ರಿಲ್‌ನಲ್ಲಿ ಅರ್ಜೆಂಟೀನಾದ ಉಷುವಾಯಾದಿಂದ ಪ್ರಯಾಣ ಆರಂಭಿಸಿತ್ತು. ನಂತರ ಪ್ರಯಾಣದ ವೇಳೆ ಸೋಂಕು ಪತ್ತೆಯಾಗಿದ್ದು, ಹಲವು ದೇಶಗಳ ಆರೋಗ್ಯ ಸಂಸ್ಥೆಗಳು ತುರ್ತು ನಿಗಾ ಕ್ರಮ ಕೈಗೊಂಡಿವೆ.

LEAVE A REPLY

Please enter your comment!
Please enter your name here

- Advertisment -spot_img