HomeKARNATAKAಈಗ ವಿದೇಶಕ್ಕೂ ಕಲಬುರಗಿ ರೊಟ್ಟಿ: ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ರಫ್ತು ಒಪ್ಪಂದ ವಿನಿಮಯ

ಈಗ ವಿದೇಶಕ್ಕೂ ಕಲಬುರಗಿ ರೊಟ್ಟಿ: ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ರಫ್ತು ಒಪ್ಪಂದ ವಿನಿಮಯ

-

Google search engine

ಕಲಬುರಗಿ: ಜಿಲ್ಲೆಯ ಪ್ರಸಿದ್ಧ ಜೋಳದ ರೊಟ್ಟಿಯನ್ನು ವಿದೇಶಗಳಿಗೆ ರಫ್ತು ಮಾಡುವ ಮಹತ್ವದ ಹೆಜ್ಜೆಗೆ ಚಾಲನೆ ದೊರೆತಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಕಲಬುರಗಿ ರೊಟ್ಟಿಯನ್ನು ರಫ್ತು ಮಾಡುವ ಪರಸ್ಪರ ಒಪ್ಪಂದ ವಿನಿಮಯ ಕಾರ್ಯಕ್ರಮ ಇಂದು ನಗರದಲ್ಲಿ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನಪರಿಷತ್ ಸದಸ್ಯರಾದ ಜಗದೇವ್ ಗುತ್ತೇದಾರ್ ಹಾಗೂ ತಿಪ್ಪಣ್ಣ ಕಮಕನೂರ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಸಮದಾ ಪಟೇಲ್ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ಗಣ್ಯರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ರೊಟ್ಟಿ ರಫ್ತು ಪೊಟ್ಟಣಗಳನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿ, “ಕಲಬುರಗಿ ರೊಟ್ಟಿಯನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸುವ ಮಹತ್ವದ ಕಾರ್ಯಕ್ಕೆ ಚಾಲನೆ ನೀಡಲಾಗಿದೆ” ಎಂದು ಹೇಳಿದರು. ರೊಟ್ಟಿ ತಯಾರಿಕೆಗೆ ಅನುಕೂಲವಾಗುವಂತೆ 200ಕ್ಕೂ ಹೆಚ್ಚು ಯಂತ್ರಗಳನ್ನು ಮಹಿಳೆಯರಿಗೆ ವಿತರಿಸಲಾಗಿದ್ದು, ಇದರಿಂದ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹೆಚ್ಚಲು ನೆರವಾಗಲಿದೆ ಎಂದು ತಿಳಿಸಿದರು. ಜೊತೆಗೆ ಕುಟುಂಬಗಳ ಆದಾಯವೂ ಹೆಚ್ಚುವ ನಿರೀಕ್ಷೆಯಿದೆ ಎಂದರು.

ಇ-ಕಾಮರ್ಸ್ ವೇದಿಕೆಗಳಾದ ಅಮೆಜಾನ್, ಝೊಮ್ಯಾಟೋ ಹಾಗೂ ಸ್ವಿಗ್ಗಿ ಸಂಸ್ಥೆಗಳು ಈ ಯೋಜನೆಗೆ ಕೈಜೋಡಿಸಿದ್ದು, ಗ್ರಾಹಕರು ಆನ್‌ಲೈನ್ ಮೂಲಕ ರೊಟ್ಟಿಯನ್ನು ಆರ್ಡರ್ ಮಾಡಿ ಪಡೆಯಬಹುದಾಗಿದೆ. ರೊಟ್ಟಿಯನ್ನು ವಿದೇಶಗಳಿಗೆ ರಫ್ತು ಮಾಡುತ್ತಿರುವ ಹಿನ್ನೆಲೆ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಆಯಾ ದೇಶಗಳ ಮಾನದಂಡಗಳಿಗೆ ಅನುಗುಣವಾಗಿ ರೊಟ್ಟಿಯನ್ನು ಸಿದ್ಧಪಡಿಸಿ ಕಳುಹಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here

- Advertisment -
Google search engine