Latest Posts

ಕ್ರೂಸ್ ಹಡಗಿನಲ್ಲಿ ಅಪರೂಪದ ವೈರಸ್: COVID ಬಳಿಕ ಮತ್ತೆ ಜಗತ್ತಿಗೆ ಆರೋಗ್ಯ ಆತಂಕ?

ಒಮ್ಮೆ ಕೋವಿಡ್ ನಂತರ “ಮತ್ತೆ ಅಂತಹ ಜಾಗತಿಕ ಆರೋಗ್ಯ ಸಂಕಷ್ಟ ಬರಲ್ಲ” ಎಂದು ಜಗತ್ತು ನಿಟ್ಟುಸಿರು ಬಿಟ್ಟಿತ್ತು. ಆದರೆ ಈಗ ದಕ್ಷಿಣ ಅಟ್ಲಾಂಟಿಕ್ ಸಾಗರದಲ್ಲಿ ಸಾಗುತ್ತಿದ್ದ ಒಂದು ಐಷಾರಾಮಿ ಕ್ರೂಸ್ ಹಡಗು ಮತ್ತೆ ಜಗತ್ತಿನ ಆರೋಗ್ಯ ವ್ಯವಸ್ಥೆಯ ಗಮನ ಸೆಳೆದಿದೆ.

ಅಪರೂಪದ ಆದರೆ ಮಾರಕ “Hantavirus” ಸೋಂಕು ಹರಡಿರುವ ಅನುಮಾನ ಹಿನ್ನೆಲೆ WHO ಈಗ 12ಕ್ಕೂ ಹೆಚ್ಚು ದೇಶಗಳಿಗೆ ಎಚ್ಚರಿಕೆ ನೀಡಿದೆ. ದಕ್ಷಿಣ ಅಟ್ಲಾಂಟಿಕ್ ಸಮುದ್ರದಲ್ಲಿ ಸಂಚರಿಸುತ್ತಿದ್ದ Dutch expedition cruise ship “MV Hondius”ನಲ್ಲಿ ಈ ಸೋಂಕಿನ ಪ್ರಕರಣಗಳು ಪತ್ತೆಯಾಗಿರುವುದು ಜಾಗತಿಕ ಆತಂಕಕ್ಕೆ ಕಾರಣವಾಗಿದೆ.

ಹಡಗಿನಲ್ಲಿ ಏನಾಯಿತು?

ಸುಮಾರು 150 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ “MV Hondius” ಹಡಗು ಅರ್ಜೆಂಟೀನಾದಿಂದ ಅಂಟಾರ್ಕ್ಟಿಕಾ ಮತ್ತು ದಕ್ಷಿಣ ಅಟ್ಲಾಂಟಿಕ್‌ನ ದೂರದ ದ್ವೀಪಗಳ ಪ್ರವಾಸದಲ್ಲಿತ್ತು. ಪ್ರಯಾಣದ ವೇಳೆ ಕೆಲವರಿಗೆ ಜ್ವರ, ಉಸಿರಾಟ ಸಮಸ್ಯೆ ಮತ್ತು ತೀವ್ರ ಅಸ್ವಸ್ಥತೆ ಕಾಣಿಸಿಕೊಂಡಿತು. ಆರಂಭದಲ್ಲಿ ಸಾಮಾನ್ಯ ವೈರಲ್ ಸೋಂಕು ಎಂದು ಭಾವಿಸಲಾಗಿತ್ತು. ಆದರೆ ನಂತರ ಪರೀಕ್ಷೆ ನಡೆಸಿದಾಗ Hantavirus ಸೋಂಕಿನ ಅನುಮಾನ ವ್ಯಕ್ತವಾಯಿತು. ಈಗಾಗಲೇ ಕನಿಷ್ಠ ಮೂರು ಮಂದಿ ಸಾವನ್ನಪ್ಪಿದ್ದು, ಹಲವು ಮಂದಿಗೆ ಸೋಂಕು ದೃಢಪಟ್ಟಿದೆ ಅಥವಾ ಶಂಕಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

 12 ದೇಶಗಳಿಗೆ WHO ಎಚ್ಚರಿಕೆ 

ಸಮಸ್ಯೆ ಕೇವಲ ಹಡಗಿನೊಳಗೆ ಸೀಮಿತವಾಗಿಲ್ಲ. ಪ್ರಯಾಣಿಕರು ವಿವಿಧ ದೇಶಗಳಿಂದ ಬಂದಿದ್ದರು. ಕೆಲವರು ಮಧ್ಯದಲ್ಲೇ ಇಳಿದು ವಿಮಾನಗಳ ಮೂಲಕ ತಮ್ಮ ದೇಶಗಳಿಗೆ ತೆರಳಿದ್ದರು. ಇದೇ ಕಾರಣಕ್ಕೆ ಸೋಂಕಿನ ಸಂಪರ್ಕ ಶೋಧನೆ ಈಗ ಜಾಗತಿಕ ಮಟ್ಟದಲ್ಲಿ ನಡೆಯುತ್ತಿದೆ. ಅಮೆರಿಕಾ, ಬ್ರಿಟನ್, ನೆದರ್ಲ್ಯಾಂಡ್ಸ್, ದಕ್ಷಿಣ ಆಫ್ರಿಕಾ, ಸ್ವಿಟ್ಜರ್ಲ್ಯಾಂಡ್, ಸಿಂಗಾಪುರ್ ಸೇರಿದಂತೆ ಹಲವು ರಾಷ್ಟ್ರಗಳ ಆರೋಗ್ಯ ಇಲಾಖೆ ಈಗ ಪ್ರಯಾಣಿಕರ ಮೇಲೆ ನಿಗಾ ವಹಿಸಿವೆ.

Hantavirus ಅಂದ್ರೇನು?

Hantavirus ಸಾಮಾನ್ಯವಾಗಿ ಇಲಿ ಮತ್ತು ಇತರ rodents ಮೂಲಕ ಹರಡುವ ಅಪರೂಪದ ವೈರಸ್. ಇವುಗಳ ಮೂತ್ರ, ಮಲ ಅಥವಾ ಲಾಲಾಜಲದ ಸಂಪರ್ಕದಿಂದ ಮನುಷ್ಯರಿಗೆ ಸೋಂಕು ಹರಡಬಹುದು. ಕೆಲವು strains ಗಂಭೀರ ಉಸಿರಾಟ ಸಮಸ್ಯೆ ಉಂಟುಮಾಡಿ ಜೀವಕ್ಕೆ ಅಪಾಯ ತರುತ್ತವೆ. ಈ outbreakನಲ್ಲಿ “Andes strain” ಇರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಈ strain ವಿಶೇಷವಾಗಿ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅಪರೂಪದ ಸಂದರ್ಭಗಳಲ್ಲಿ ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವ ಸಾಧ್ಯತೆಯೂ ಇದೆ.

ಭಾರತೀಯರೂ ಹಡಗಿನಲ್ಲಿ ಇದ್ದರಾ?

ಹೌದು.

ವರದಿಗಳ ಪ್ರಕಾರ ಇಬ್ಬರು ಭಾರತೀಯ ಸಿಬ್ಬಂದಿಯೂ ಈ ಹಡಗಿನಲ್ಲಿ ಇದ್ದರು. ಆದರೆ ಭಾರತದ ಆರೋಗ್ಯ ಅಧಿಕಾರಿಗಳು ಸದ್ಯಕ್ಕೆ ಭಾರತಕ್ಕೆ ಯಾವುದೇ ತಕ್ಷಣದ ದೊಡ್ಡ ಅಪಾಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ICMR ಪ್ರಕಾರ, ಇದು isolated cluster ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಅಗತ್ಯವಿಲ್ಲ ಎಂದು ಹೇಳಲಾಗಿದೆ.

ಕೋವಿಡ್ ತರಹ ಮತ್ತೊಂದು Pandemic ಭೀತಿ ಇದೆಯಾ?

ತಜ್ಞರ ಪ್ರಕಾರ — ಸದ್ಯಕ್ಕೆ ಇಲ್ಲ. Hantavirus ಕೋವಿಡ್‌ನಂತೆ ಸುಲಭವಾಗಿ ಗಾಳಿಯಲ್ಲಿ ಹರಡುವ ವೈರಸ್ ಅಲ್ಲ. ಇದರ human-to-human transmission ಬಹಳ ಸೀಮಿತವಾಗಿದೆ. ಹೀಗಾಗಿ ಜಾಗತಿಕ pandemic ಆಗುವ ಸಾಧ್ಯತೆ ಕಡಿಮೆ ಎಂದು WHO ಹೇಳಿದೆ. ಆದರೆ cruise ship ಪರಿಸ್ಥಿತಿ ಮತ್ತು ಹಲವಾರು ದೇಶಗಳಿಗೆ ಪ್ರಯಾಣಿಕರು ತೆರಳಿರುವ ಹಿನ್ನೆಲೆ ಆರೋಗ್ಯ ಇಲಾಖೆ ಹೆಚ್ಚಿನ ಎಚ್ಚರಿಕೆ ವಹಿಸಿದೆ.

ಜಗತ್ತಿಗೆ ಮತ್ತೆ ಎಚ್ಚರಿಕೆಯ ಗಂಟೆ?

COVID ನಂತರ ಜಗತ್ತು health surveillance ಮತ್ತು global travel safety ಬಗ್ಗೆ ಹೆಚ್ಚು ಜಾಗರೂಕವಾಗಿದೆ. ಈ ಘಟನೆ ಮತ್ತೊಮ್ಮೆ ಒಂದು ಸತ್ಯ ನೆನಪಿಸಿದೆ — ಜಗತ್ತು ಈಗ ಸಂಪೂರ್ಣ interconnected. ಸಾವಿರಾರು ಕಿಲೋಮೀಟರ್ ದೂರದ ಸಮುದ್ರ ಮಧ್ಯೆ ಆರಂಭವಾದ ಸೋಂಕು ಕೆಲವೇ ದಿನಗಳಲ್ಲಿ ಅನೇಕ ದೇಶಗಳ ಆರೋಗ್ಯ ವ್ಯವಸ್ಥೆಯನ್ನು ಎಚ್ಚರಿಕೆಗೆ ತಳ್ಳುವಷ್ಟು ವಿಶ್ವ ಈಗ ಸಣ್ಣದಾಗಿದೆ.

Latest Posts

spot_imgspot_img