ಕಾರ್ ಶೋರೂಮ್‌ಗೆ ಹೋದಾಗ ಹೊಸ ವಾಹನದ deliveryಗೆ ತಿಂಗಳುಗಳ ಕಾಲ ಕಾಯಬೇಕಾದ ಪರಿಸ್ಥಿತಿ ಮತ್ತೆ ಬರಬಹುದಾ?
ಪೆಟ್ರೋಲ್, shipping, raw material ವೆಚ್ಚ ಏರಿಕೆಯಿಂದ ವಾಹನಗಳ ಬೆಲೆ ಮತ್ತೊಮ್ಮೆ ಜಿಗಿಯಬಹುದಾ? ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಈಗ ನಿಧಾನವಾಗಿ ಭಾರತದ ಆಟೋ ಉದ್ಯಮದ ಮೇಲೂ ಪರಿಣಾಮ ಬೀಳಲು ಆರಂಭಿಸಿದೆ. ವಾಹನ ತಯಾರಿಕಾ ಕಂಪನಿಗಳು supply chain ಸಮಸ್ಯೆ, raw material ಕೊರತೆ ಮತ್ತು logistics ವೆಚ್ಚ ಏರಿಕೆಯನ್ನು ಎದುರಿಸುತ್ತಿವೆ.
ಸಾವಿರಾರು ಕಿಲೋಮೀಟರ್ ದೂರದ ಯುದ್ಧ… ಆದರೆ ಹೊಡೆತ ಭಾರತಕ್ಕೆ!
ಮೊದಲ ನೋಟಕ್ಕೆ ಪಶ್ಚಿಮ ಏಷ್ಯಾದ ಯುದ್ಧ ಮತ್ತು ಭಾರತೀಯ ವಾಹನ ಉದ್ಯಮಕ್ಕೆ ಯಾವುದೇ ಸಂಬಂಧ ಇಲ್ಲ ಅನ್ನಿಸಬಹುದು. ಆದರೆ ವಾಸ್ತವ ಬೇರೆ. ಜಗತ್ತಿನ ತೈಲ ಮತ್ತು LNG ಸಾಗಣೆಯ ದೊಡ್ಡ ಭಾಗ “Strait of Hormuz” ಮೂಲಕ ಸಾಗುತ್ತದೆ. ಇದೇ ಮಾರ್ಗದಲ್ಲಿ ವ್ಯತ್ಯಯ ಉಂಟಾದರೆ crude oil, aluminium, chemicals, auto components ಸೇರಿದಂತೆ ಅನೇಕ ವಸ್ತುಗಳ ಸರಬರಾಜು ಮೇಲೆ ಪರಿಣಾಮ ಬೀಳುತ್ತದೆ. ಭಾರತದ ಆಟೋ ಉದ್ಯಮ ಈ ಜಾಗತಿಕ supply chain ಮೇಲೆ ಬಹಳ ಮಟ್ಟಿಗೆ ಅವಲಂಬಿತವಾಗಿದೆ.
ಈಗ ಕಂಪನಿಗಳಿಗೆ ದೊಡ್ಡ ತಲೆನೋವು ಏನು?
ವಾಹನ ತಯಾರಕರಿಗೆ ಈಗ ಮೂರು ದೊಡ್ಡ ಸಮಸ್ಯೆಗಳು ಎದುರಾಗುತ್ತಿವೆ:
- Raw material ವೆಚ್ಚ ಏರಿಕೆ
- Shipping delay
- Logistics cost ಹೆಚ್ಚಳ
ವಿಶೇಷವಾಗಿ LPG ಮತ್ತು natural gas ಕೊರತೆ paint shop, heat treatment ಮುಂತಾದ ಉತ್ಪಾದನಾ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು SIAM ಅಧ್ಯಕ್ಷ ಶೈಲೇಶ್ ಚಂದ್ರ ಎಚ್ಚರಿಸಿದ್ದಾರೆ. ಕೆಲ ಕಂಪನಿಗಳು ಈಗ LPG ಬಳಕೆ ಕಡಿಮೆ ಮಾಡಿ PNGಗೆ shift ಆಗಲು ಪ್ರಯತ್ನಿಸುತ್ತಿವೆ.
Shipping delay ಯಾಕೆ ಆಟೋ ಉದ್ಯಮಕ್ಕೆ ಅಪಾಯ?
ಒಂದು ಕಾರು ಅಥವಾ ಬೈಕ್ ನಿರ್ಮಾಣಕ್ಕೆ ಸಾವಿರಾರು parts ಬೇಕಾಗುತ್ತವೆ. ಅವುಗಳಲ್ಲಿ ಕೆಲವು Europeನಿಂದ ಬರುತ್ತವೆ. ಕೆಲವು Gulf ದೇಶಗಳಿಂದ. ಕೆಲವು East Asiaನಿಂದ. ಒಂದು ಸಣ್ಣ chip ಅಥವಾ component delay ಆದರೂ production line ಸಂಪೂರ್ಣ ನಿಲ್ಲುವ ಅಪಾಯ ಇರುತ್ತದೆ. ಕೋವಿಡ್ ಸಮಯದಲ್ಲಿ Semiconductor shortage ಕಾರಣ ಕಾರು ಕಂಪನಿಗಳು ಉತ್ಪಾದನೆ ಕಡಿಮೆ ಮಾಡಬೇಕಾದ ಘಟನೆ ಈಗಲೂ industryಗೆ ನೆನಪಿದೆ. ಇದೇ ಕಾರಣಕ್ಕೆ ಈಗ OEMs “Just-in-Time” model ಬಿಟ್ಟು “Just-in-Case” strategy ಕಡೆ ತಿರುಗುತ್ತಿವೆ. ಅಂದರೆ ಹೆಚ್ಚುವರಿ stock ಇಟ್ಟುಕೊಳ್ಳಲು ಆರಂಭಿಸಿವೆ.
ವಾಹನ ಬೆಲೆ ಮತ್ತೆ ಏರಬಹುದಾ?
ತಜ್ಞರ ಪ್ರಕಾರ, crude oil ಮತ್ತು aluminium ಬೆಲೆ ಏರಿಕೆ ದೀರ್ಘಕಾಲ ಮುಂದುವರಿದರೆ ವಾಹನ ತಯಾರಿಕಾ ವೆಚ್ಚ ಹೆಚ್ಚುವುದು ಖಚಿತ. ಕೆಲ ಕಂಪನಿಗಳು ಈಗಾಗಲೇ price hike ಬಗ್ಗೆ ಸೂಚನೆ ನೀಡಿವೆ. ಹೀಗಾಗಿ ಮುಂದಿನ ತಿಂಗಳುಗಳಲ್ಲಿ ಕಾರು ಮತ್ತು ಬೈಕ್ ಬೆಲೆ ಏರಿಕೆಯ ಸಾಧ್ಯತೆಯನ್ನು industry ತಳ್ಳಿಹಾಕುತ್ತಿಲ್ಲ. ಆದರೆ ಭಾರತೀಯ ಮಾರುಕಟ್ಟೆ ಇನ್ನೂ ಬಲವಾಗಿದೆ. ಒಳ್ಳೆಯ ಸಂಗತಿ ಏನೆಂದರೆ ಭಾರತೀಯ ಮಾರುಕಟ್ಟೆಯಲ್ಲಿ demand ಇನ್ನೂ ಕುಸಿತ ಕಂಡಿಲ್ಲ. 2026ರ ಏಪ್ರಿಲ್‌ನಲ್ಲಿ ಭಾರತದಲ್ಲಿ ದಾಖಲೆ ಮಟ್ಟದ ವಾಹನ ಮಾರಾಟವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಾಹನ ಬೇಡಿಕೆ ವಿಶೇಷವಾಗಿ ಹೆಚ್ಚಾಗಿದೆ. ಅಂದರೆ ಸಮಸ್ಯೆ ಈಗ demandನಲ್ಲಿ ಅಲ್ಲ… supply sideನಲ್ಲಿ.
ಮುಂದಿನ ದೊಡ್ಡ ಪ್ರಶ್ನೆ ಏನು?
ಈ ಸಂಘರ್ಷ ಬೇಗ ಅಂತ್ಯವಾದರೆ ಆಟೋ ಉದ್ಯಮ ನಿಧಾನವಾಗಿ ಸ್ಥಿರವಾಗಬಹುದು. ಆದರೆ ಪರಿಸ್ಥಿತಿ ದೀರ್ಘಕಾಲ ಮುಂದುವರಿದರೆ vehicle prices ಹೆಚ್ಚಳ, waiting period ಏರಿಕೆ, spare parts shortage, EV battery material ಸಮಸ್ಯೆ ಇವೆಲ್ಲವೂ ಎದುರಾಗುವ ಸಾಧ್ಯತೆ ಇದೆ.
ಜಾಗತಿಕ ಯುದ್ಧ… ಸ್ಥಳೀಯ ಪರಿಣಾಮ
ಇಂದು ಒಂದು ದೇಶದ ಯುದ್ಧ ಮತ್ತೊಂದು ದೇಶದ kitchen, petrol bunk ಮತ್ತು automobile showroom ಮೇಲೆ ಪರಿಣಾಮ ಬೀರುವಷ್ಟು ಜಗತ್ತು interconnected ಆಗಿದೆ. ಪಶ್ಚಿಮ ಏಷ್ಯಾದ ಉದ್ವಿಗ್ನತೆ ಈಗ ಭಾರತದ ಆಟೋ ಉದ್ಯಮಕ್ಕೆ ಎಚ್ಚರಿಕೆಯ ಗಂಟೆ ಮೊಳಗಿಸಿದೆ. ಕಾರು ಖರೀದಿಸುವ ಗ್ರಾಹಕರಿಂದ ಹಿಡಿದು ದೊಡ್ಡ OEMಗಳವರೆಗೆ — ಎಲ್ಲರೂ ಈಗ ಜಾಗತಿಕ ರಾಜಕೀಯದ ಪರಿಣಾಮ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.



