ಹೊಸ ಅವತಾರದಲ್ಲಿ ಕಂಗನಾ ರನೌತ್: ತೆಲುಗಿನ ಕ್ರಿಯೇಟಿವ್ ಡೈರೆಕ್ಟರ್ ಜೊತೆ ಹಾರರ್ ಹಂಗಾಮ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ನಡೆದ ‘ಹಾರರ್ ಕಾನ್ ಇಂಡಿಯಾ 2026’ರ ಹ್ಯಾಲೋವಿನ್ ಸಂಭ್ರಮದಲ್ಲಿ ಬಹುಭಾಷಾ ನಟ ಹಾಗೂ ನಿರ್ಮಾಪಕ ರಾಣಾ ದಗ್ಗುಬಾಟಿ ಅವರು ಪ್ರೇಕ್ಷಕರಿಗೆ ಸರ್ಪ್ರೈಸ್ ನೀಡಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯ ಹೊಸ ಹಾರರ್ ಚಿತ್ರ ‘ಸ್ಕೇರಿ ಪಿಕ್ಚರ್’ ಯೋಜನೆಯನ್ನು ಅವರು ವೇದಿಕೆಯ ಮೇಲೆ ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್‌ನ ಫೈರ್ ಬ್ರಾಂಡ್ ಕಂಗನಾ ರನೌತ್ ನಾಯಕಿಯಾಗಿ ಅಭಿನಯಿಸುತ್ತಿದ್ದು, ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಸುದ್ದಿಯನ್ನು ಹಂಚಿಕೊಳ್ಳುವ ಮೂಲಕ ಖಚಿತಪಡಿಸಿದ್ದಾರೆ.

ಈ ಹಾರರ್ ಸಿನಿಮಾವನ್ನು ತೆಲುಗು ಚಿತ್ರರಂಗದ ಭಿನ್ನ ಶೈಲಿಯ ನಟ-ನಿರ್ದೇಶಕ ರವಿಬಾಬು ನಿರ್ದೇಶಿಸಲಿದ್ದಾರೆ. ಹಿರಿಯ ನಟ ಚಲಪತಿ ರಾವ್ ಅವರ ಪುತ್ರರಾದ ರವಿಬಾಬು, 1998ರಿಂದ ನಟರಾಗಿ ಹಾಗೂ 2002ರಿಂದ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಥ್ರಿಲ್ಲರ್ ಹಾಗೂ ಹಾರರ್ ಕಥೆಗಳಿಗೆ ಹೆಸರುವಾಸಿಯಾದ ಇವರು, ‘ಅನುಸೂಯ’ ಹಾಗೂ ‘ಅವುನು’ ನಂತಹ ಹಿಟ್ ಚಿತ್ರಗಳನ್ನು ನೀಡಿದ್ದಾರೆ. 2023ರಲ್ಲಿ ಹಂದಿ ಮರಿಯನ್ನೇ ಮುಖ್ಯ ಪಾತ್ರವಾಗಿಟ್ಟುಕೊಂಡು ‘ಅಧುಗೋ’ ಎಂಬ ಪ್ರಯೋಗಾತ್ಮಕ ಸಿನಿಮಾ ಮಾಡಿದ್ದ ರವಿಬಾಬು, ಇತ್ತೀಚೆಗೆ ‘ರೇಜರ್’ ಸಿನಿಮಾವನ್ನು ನಿರ್ದೇಶಿಸಿದ್ದರು. ಇದೀಗ ‘ಸ್ಕೇರಿ ಪಿಕ್ಚರ್’ ಮೂಲಕ ಪ್ರಥಮ ಬಾರಿಗೆ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ವೇದಿಕೆಯಲ್ಲಿ ಮಾತನಾಡಿದ ರಾಣಾ, “ಇದು ಒಂದು ರೋಚಕ ಹಾರರ್ ಸಿನಿಮಾ. ತೆಲುಗಿನಲ್ಲಿ ಹಲವು ಸೂಪರ್ ಹಿಟ್ ಹಾರರ್ ಸಿನಿಮಾಗಳನ್ನು ನಿರ್ದೇಶಿಸಿರುವ ನನ್ನ ಸ್ನೇಹಿತ ರವಿಬಾಬು ಅವರ ಮೊದಲ ಹಿಂದಿ ಫೀಚರ್ ಸಿನಿಮಾ ಇದಾಗಿದೆ. ಯಾವುದೇ ಮಾಧ್ಯಮಗಳಿಗೂ ಮಾಹಿತಿ ನೀಡದೆ, ಮೊದಲ ಬಾರಿಗೆ ಈ ಹಾರರ್ ಕಾನ್ ವೇದಿಕೆಯಲ್ಲಿಯೇ ಚಿತ್ರದ ಶೀರ್ಷಿಕೆಯನ್ನು ಪ್ರಕಟಿಸುತ್ತಿದ್ದೇವೆ” ಎಂದು ಸಂತಸ ಹಂಚಿಕೊಂಡರು.

ಸಾಮಾನ್ಯವಾಗಿ ದೊಡ್ಡ ತಾರಾಗಣವಿಲ್ಲದೆ ವಿಭಿನ್ನ ಹಾಗೂ ನೈಜ ಕಥೆಗಳನ್ನೇ ಆಯ್ದುಕೊಳ್ಳುವ ರವಿಬಾಬು, ಕಂಗನಾ ರನೌತ್ ಅವರಂತಹ ಪ್ರತಿಭಾವಂತ ನಟಿಯ ಜೊತೆ ಸೇರಿ ಎಂತಹ ಭಯಾನಕ ಹಾಗೂ ಕುತೂಹಲಕಾರಿ ಕಥೆಯನ್ನು ಪ್ರೇಕ್ಷಕರ ಮುಂದೆ ತರಲಿದ್ದಾರೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ

LEAVE A REPLY

Please enter your comment!
Please enter your name here

More like this

25°C ಕೆಳಗಿನ ತಾಪಮಾನ ಇರುವ ಪ್ರವಾಸಿ ತಾಣಗಳು: ಬೇಸಿಗೆಯಿಂದ ಪಾರಾಗಲು ಭಾರತೀಯರಿಗೆ...

ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಉಷ್ಣಾಂಶ ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆ, ತಂಪಾದ ವಾತಾವರಣದ ಪ್ರವಾಸಿ ತಾಣಗಳತ್ತ ಜನರು ಮುಖ ಮಾಡುತ್ತಿದ್ದಾರೆ. ಇತ್ತೀಚಿನ ವರದಿಗಳ...

ಗುಲ್ಮರ್ಗ್ ಅಥವಾ ಪಹಲ್ಗಾಮ್? ಕಾಶ್ಮೀರಕ್ಕೆ ಹೋಗುವ ಮುನ್ನ ಇದನ್ನು ಓದಿ

ಕಾಶ್ಮೀರಕ್ಕೆ ಹೋಗಬೇಕು ಎನ್ನುವುದು ಅನೇಕ ಜನರ ಕನಸು... ಹಿಮ ಮುಚ್ಚಿದ ಬೆಟ್ಟಗಳು, ಹಸಿರು ಕಣಿವೆಗಳು, ತಣ್ಣನೆಯ ಗಾಳಿ, ಕಣ್ಣು ತುಂಬುವ ದೃಶ್ಯಗಳು... ಇವೆಲ್ಲ ಒಂದೇ...

ಕೊಡಗು: ಪ್ರಕೃತಿ ರಮಣೀಯ ಮಂಜಿನ ಬೆಟ್ಟಗಳ ಹಿಂದೆ ಅಡಗಿದೆ ಒಂದು...

ಕೆಲವು ಸ್ಥಳಗಳು ಕೇವಲ ಪ್ರವಾಸಿ ತಾಣಗಳಾಗಿರುವುದಿಲ್ಲ… ಅವು ಕಥೆಗಳಾಗಿ ನಿಮ್ಮೊಳಗೆ ಉಳಿಯುತ್ತವೆ. ಅಂತಹ ಒಂದು ಸ್ಥಳವೇ ಕೊಡಗು! ನಾನು ಮೊದಲ ಬಾರಿ ಕೊಡಗಿನ ಮಂಜಿನ...