HomeKARNATAKAಕೆಆರ್‌ಎಸ್ ನೀರಿನ ಮಟ್ಟ 15 ದಿನಗಳಲ್ಲಿ 8 ಅಡಿ ಕುಸಿತ: ಕಾವೇರಿ ಜಲಾನಯನ ಪ್ರದೇಶದಲ್ಲಿ ಆತಂಕ

ಕೆಆರ್‌ಎಸ್ ನೀರಿನ ಮಟ್ಟ 15 ದಿನಗಳಲ್ಲಿ 8 ಅಡಿ ಕುಸಿತ: ಕಾವೇರಿ ಜಲಾನಯನ ಪ್ರದೇಶದಲ್ಲಿ ಆತಂಕ

-

spot_img

ಮಂಡ್ಯ: ಬೇಸಿಗೆಯ ತೀವ್ರತೆ ಹೆಚ್ಚಾದ ಹಿನ್ನೆಲೆ ಮಂಡ್ಯ ಜಿಲ್ಲೆಯ ಪ್ರಸಿದ್ಧ ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟಿನ ನೀರಿನ ಮಟ್ಟ ಕೇವಲ 15 ದಿನಗಳಲ್ಲಿ 8 ಅಡಿಗಳಷ್ಟು ಕುಸಿದಿದೆ. ಇದೀಗ ಅಣೆಕಟ್ಟಿನಲ್ಲಿ 92.90 ಅಡಿಗಳಷ್ಟು ಮಾತ್ರ ನೀರು ಲಭ್ಯವಿದೆ.

124.80 ಅಡಿ ಗರಿಷ್ಠ ಸಾಮರ್ಥ್ಯ ಹೊಂದಿರುವ ಕೆಆರ್‌ಎಸ್ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮುಂಗಾರು ಮಳೆ ನಿಗದಿತ ಸಮಯಕ್ಕೆ ಆರಂಭವಾಗದಿದ್ದರೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಅಭಾವ ಉಂಟಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಪ್ರಸ್ತುತ ಕೆಆರ್‌ಎಸ್ ಅಣೆಕಟ್ಟಿನಿಂದ ಮಂಡ್ಯ, ಮೈಸೂರು ಹಾಗೂ ಬೆಂಗಳೂರು ನಗರಗಳಿಗೆ ಪ್ರತಿದಿನ ಕುಡಿಯುವ ನೀರಿಗಾಗಿ 4,379 ಕ್ಯೂಸೆಕ್ ನೀರು ಬಳಕೆಯಾಗುತ್ತಿದೆ.

ಇದೇ ವೇಳೆ ಮಂಡ್ಯ ಜಿಲ್ಲೆಯ ಬೇಸಿಗೆ ಬೆಳೆಗಳು ಒಣಗದಂತೆ ಕಳೆದ ಒಂದು ವಾರದಿಂದ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಜೊತೆಗೆ ತಮಿಳುನಾಡಿಗೂ ನೀರು ಬಿಡುಗಡೆ ಮುಂದುವರಿದಿದೆ.

ಆದರೆ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here

- Advertisment -spot_img