ಶಾಂತಿ ಮಾತುಕತೆಗೆ ಮುನ್ನ ಉಕ್ರೇನ್ ಮೇಲೆ ರಷ್ಯಾ ದಾಳಿ: 29 ಮಂದಿ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಷ್ಯಾ–ಉಕ್ರೇನ್ ಯುದ್ಧಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಅಮೆರಿಕ ಮಧ್ಯಸ್ಥಿಕೆಯಲ್ಲಿ ಹೊಸ ಮಾತುಕತೆ ನಡೆಯಲು ಸಿದ್ಧತೆಗಳಾಗುತ್ತಿರುವ ಬೆನ್ನಲ್ಲೇ, ಉಕ್ರೇನ್ ಮೇಲೆ ರಷ್ಯಾದ ದಾಳಿಗಳು ತೀವ್ರಗೊಂಡಿವೆ.

ಜಪೊರಿಜಿಯಾ ಪ್ರದೇಶದ ಕೊಮಿಶುವಾಖಾ ಗ್ರಾಮದಲ್ಲಿ ಮಾನವೀಯ ನೆರವು ವಿತರಿಸುತ್ತಿದ್ದ ಕೇಂದ್ರದ ಮೇಲೆ ನಡೆದ ದಾಳಿಯಲ್ಲಿ 29 ಮಂದಿ ಮೃತಪಟ್ಟಿದ್ದು, ಹಲವರು ಅವಶೇಷಗಳಡಿ ಸಿಲುಕಿರುವ ಆತಂಕವಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.

ಖಾರ್ಕಿವ್ ಆಸ್ಪತ್ರೆ ಮೇಲೂ ದಾಳಿ

ಮಂಗಳವಾರ ಖಾರ್ಕಿವ್‌ನ ಆಸ್ಪತ್ರೆಯ ಮೇಲೆ ನಡೆದ ದಾಳಿಯಲ್ಲಿ 73 ಮಂದಿ ಗಾಯಗೊಂಡಿದ್ದು, ಹೃದ್ರೋಗ ವಿಭಾಗಕ್ಕೆ ಹಾನಿಯಾಗಿದೆ. ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳೂ ದಾಳಿಯ ಪರಿಣಾಮಕ್ಕೆ ಒಳಗಾಗಿದ್ದಾರೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಡ್ನಿಪ್ರೊಪೆಟ್ರೋವ್ಸ್ಕ್ ಪ್ರದೇಶದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ.

ಕೊಮಿಶುವಾಖಾ ಗ್ರಾಮದಲ್ಲಿ 48 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ರಕ್ಷಣಾ ಕಾರ್ಯಾಚರಣೆಗಳು ಭದ್ರತಾ ಪರಿಸ್ಥಿತಿಗೆ ಅನುಗುಣವಾಗಿ ಮುಂದುವರಿದಿವೆ.

ಅಬುಧಾಬಿಯಲ್ಲಿ ಶಾಂತಿ ಮಾತುಕತೆ

ನವೆಂಬರ್ 10 ಮತ್ತು 11ರಂದು ಅಬುಧಾಬಿಯಲ್ಲಿ ರಷ್ಯಾ, ಉಕ್ರೇನ್ ಹಾಗೂ ಅಮೆರಿಕದ ಪ್ರತಿನಿಧಿಗಳ ನಡುವೆ ಮಾತುಕತೆ ನಡೆಯಲಿದೆ ಎಂದು ಅಮೆರಿಕದ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ತಿಳಿಸಿದ್ದಾರೆ. ಯುದ್ಧಾನಂತರದ ಭದ್ರತಾ ವ್ಯವಸ್ಥೆ, ಉದ್ವಿಗ್ನತೆ ಕಡಿತ, ಮಾನವೀಯ ನೆರವು ಮತ್ತು ಶಾಂತಿಯ ಮುಂದಿನ ಹಂತಗಳು ಚರ್ಚೆಯ ವಿಷಯಗಳಾಗಿವೆ.

ಕ್ಯಾಲೆಂಡರ್ ನೋಡಿ

LEAVE A REPLY

Please enter your comment!
Please enter your name here

More like this

25°C ಕೆಳಗಿನ ತಾಪಮಾನ ಇರುವ ಪ್ರವಾಸಿ ತಾಣಗಳು: ಬೇಸಿಗೆಯಿಂದ ಪಾರಾಗಲು ಭಾರತೀಯರಿಗೆ...

ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಉಷ್ಣಾಂಶ ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆ, ತಂಪಾದ ವಾತಾವರಣದ ಪ್ರವಾಸಿ ತಾಣಗಳತ್ತ ಜನರು ಮುಖ ಮಾಡುತ್ತಿದ್ದಾರೆ. ಇತ್ತೀಚಿನ ವರದಿಗಳ...

ಗುಲ್ಮರ್ಗ್ ಅಥವಾ ಪಹಲ್ಗಾಮ್? ಕಾಶ್ಮೀರಕ್ಕೆ ಹೋಗುವ ಮುನ್ನ ಇದನ್ನು ಓದಿ

ಕಾಶ್ಮೀರಕ್ಕೆ ಹೋಗಬೇಕು ಎನ್ನುವುದು ಅನೇಕ ಜನರ ಕನಸು... ಹಿಮ ಮುಚ್ಚಿದ ಬೆಟ್ಟಗಳು, ಹಸಿರು ಕಣಿವೆಗಳು, ತಣ್ಣನೆಯ ಗಾಳಿ, ಕಣ್ಣು ತುಂಬುವ ದೃಶ್ಯಗಳು... ಇವೆಲ್ಲ ಒಂದೇ...

ಕೊಡಗು: ಪ್ರಕೃತಿ ರಮಣೀಯ ಮಂಜಿನ ಬೆಟ್ಟಗಳ ಹಿಂದೆ ಅಡಗಿದೆ ಒಂದು...

ಕೆಲವು ಸ್ಥಳಗಳು ಕೇವಲ ಪ್ರವಾಸಿ ತಾಣಗಳಾಗಿರುವುದಿಲ್ಲ… ಅವು ಕಥೆಗಳಾಗಿ ನಿಮ್ಮೊಳಗೆ ಉಳಿಯುತ್ತವೆ. ಅಂತಹ ಒಂದು ಸ್ಥಳವೇ ಕೊಡಗು! ನಾನು ಮೊದಲ ಬಾರಿ ಕೊಡಗಿನ ಮಂಜಿನ...