ಹಾಕಿ ದಿಗ್ಗಜ ಸೋಮಯ್ಯ ಮನೆಯಲ್ಲಿ ಕಳ್ಳತನ : ಮಾಸ್ಕೋ ಒಲಿಂಪಿಕ್ಸ್‌ ಗೋಲ್ಡ್‌ ಮೆಡಲ್‌ ಗಾಯಬ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಟೀಂ ಇಂಡಿಯಾ ಹಾಕಿ ತಂಡದ ಮಾಜಿ ನಾಯಕ, 980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದ ಖ್ಯಾತ ಕ್ರೀಡಾಪಟು ಎಂ.ಎಂ. ಸೋಮಯ್ಯ ಅವರ ಮನೆಗೆ ಖದೀಮರು ಕನ್ನ ಹಾಕಿದ್ದಾರೆ. ಬೆಂಗಳೂರಿನ ಇಂದಿರಾನಗರದ ನ್ಯೂ ತಿಪ್ಪಸಂದ್ರ ವ್ಯಾಪ್ತಿಯಲ್ಲಿರುವ ಸೋಮಯ್ಯ ಅವರ ಮನೆಗೆ ಬೆಳ್ಳಂಬೆಳಗ್ಗೆ ಕಳ್ಳರು ನುಗ್ಗಿದ್ದು, ದೇಶದ ಹೆಮ್ಮೆಯಾಗಿರುವ ಒಲಿಂಪಿಕ್ಸ್‌ ಚಿನ್ನದ ಪದಕ, ಏಷ್ಯನ್‌ ಗೇಮ್ಸ್‌ ಪದಕಗಳು ಸೇರಿದಂತೆ ಬೆಲೆಬಾಳುವ ಆಭರಣಗಳು ಮತ್ತು ನಗದನ್ನು ಖದೀಮರು ದೋಚಿಕೊಂಡಿದ್ದಾರೆ. ಭಾನುವಾರ ಬೆಳಗ್ಗೆ ಸೋಮಯ್ಯ ಅವರು ತಮ್ಮ ಕುಟುಂಬದವರ ಜೊತೆ ಕೊಡಗಿಗೆ ತೆರಳಿದ್ದರು. ಮಂಗಳವಾರ ಪಕ್ಕದ ಮನೆಯ ನಿವಾಸಿ ನಾರಾಯಣ್‌ ಅವರಿಗೆ ಮನೆಯ ಬಾಗಿಲು ತೆಗೆದಿರುವುದು ಕಾಣಿಸಿತ್ತು.ಒಳಕ್ಕೆ ಹೋಗಿ ನೋಡಿದಾಗ ಮನೆಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಹಾಗೂ ಬೀರುಗಳು ಓಪನ್‌ ಆಗಿರುವುದು ಕಂಡಿತ್ತು. ತಕ್ಷಣ ಅವರು ಸೋಮಯ್ಯ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸಿಸಿಟಿವಿ ಪರೀಕ್ಷೆ ಮಾಡಿದಾಗ ಬೆಳಗ್ಗೆ ಎರಡು ಮುಕ್ಕಾಲು ಸುಮಾರಿಗೆ ಇಬ್ಬರು ಕಳ್ಳರು ಮನೆಗೆ ಬಂದಿರುವುದು ಗೊತ್ತಾಗಿದೆ. ಒಬ್ಬ ಡಾರ್ಕ್‌ ಬ್ಲೂ ಹಾಗೂ ಮತ್ತೊಬ್ಬ ರೆಡ್‌ ಟೀ ಶರ್ಟ್‌ ಧರಿಸಿದ್ದ. ಮುಖ್ಯದ್ವಾರವನ್ನು ಒಡೆದು ಇವರು ಕಳ್ಳತನ ಮಾಡಿದ್ದಾರೆ. ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಇಬ್ಬರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಚುರುಕುಗೊಳಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಏನೆಲ್ಲಾ ಕಳವಾಗಿದೆ?

ಐತಿಹಾಸಿಕ ಕ್ರೀಡಾ ಪದಕಗಳು, ಚಿನ್ನಾಭರಣ, ಚಿನ್ನದ ನಾಣ್ಯ, ಚಿನ್ನದ ಬಳೆ, ಬೆಳ್ಳಿ ಚಮಚಮ ಬೆಳ್ಳಿ ಕಪ್‌, ಬೆಳ್ಳಿ ಪಾತ್ರೆ ಹಾಗೂ 30,000 ರೂ. ನಗದು ಹಣವನ್ನು ಕದ್ದಿದ್ದಾರೆ. ಇದೆಲ್ಲದರ ಅಂದಾಜು ಮೊತ್ತ ನಾಲ್ಕು ಲಕ್ಷ ರೂಪಾಯಿ ಎಂದು ಹೇಳಲಾಗಿದೆ. ಇದರ ಜೊತೆಗೆ ಬೆಲೆ ಕಟ್ಟಲಾಗದ ಪದಕಗಳನ್ನು ಕದ್ದಿರುವುದು ಕ್ರೀಡಾಭಿಮಾನಿಗಳಲ್ಲಿ ಬೇಸರ ತರಿಸಿದೆ.

LEAVE A REPLY

Please enter your comment!
Please enter your name here

More like this

25°C ಕೆಳಗಿನ ತಾಪಮಾನ ಇರುವ ಪ್ರವಾಸಿ ತಾಣಗಳು: ಬೇಸಿಗೆಯಿಂದ ಪಾರಾಗಲು ಭಾರತೀಯರಿಗೆ...

ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಉಷ್ಣಾಂಶ ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆ, ತಂಪಾದ ವಾತಾವರಣದ ಪ್ರವಾಸಿ ತಾಣಗಳತ್ತ ಜನರು ಮುಖ ಮಾಡುತ್ತಿದ್ದಾರೆ. ಇತ್ತೀಚಿನ ವರದಿಗಳ...

ಗುಲ್ಮರ್ಗ್ ಅಥವಾ ಪಹಲ್ಗಾಮ್? ಕಾಶ್ಮೀರಕ್ಕೆ ಹೋಗುವ ಮುನ್ನ ಇದನ್ನು ಓದಿ

ಕಾಶ್ಮೀರಕ್ಕೆ ಹೋಗಬೇಕು ಎನ್ನುವುದು ಅನೇಕ ಜನರ ಕನಸು... ಹಿಮ ಮುಚ್ಚಿದ ಬೆಟ್ಟಗಳು, ಹಸಿರು ಕಣಿವೆಗಳು, ತಣ್ಣನೆಯ ಗಾಳಿ, ಕಣ್ಣು ತುಂಬುವ ದೃಶ್ಯಗಳು... ಇವೆಲ್ಲ ಒಂದೇ...

ಕೊಡಗು: ಪ್ರಕೃತಿ ರಮಣೀಯ ಮಂಜಿನ ಬೆಟ್ಟಗಳ ಹಿಂದೆ ಅಡಗಿದೆ ಒಂದು...

ಕೆಲವು ಸ್ಥಳಗಳು ಕೇವಲ ಪ್ರವಾಸಿ ತಾಣಗಳಾಗಿರುವುದಿಲ್ಲ… ಅವು ಕಥೆಗಳಾಗಿ ನಿಮ್ಮೊಳಗೆ ಉಳಿಯುತ್ತವೆ. ಅಂತಹ ಒಂದು ಸ್ಥಳವೇ ಕೊಡಗು! ನಾನು ಮೊದಲ ಬಾರಿ ಕೊಡಗಿನ ಮಂಜಿನ...