ಆಪರೇಷನ್ ಸಿಂದೂರ ಬಳಿಕ ಮೊದಲ ಬಾರಿ: ಎಸ್‌ಸಿಒ ಸಭೆಗೆ ಪಾಕಿಸ್ತಾನಕ್ಕೆ ಆಹ್ವಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧದಲ್ಲಿ ಉದ್ವಿಗ್ನತೆ ಮುಂದುವರಿದಿರುವ ಬೆನ್ನಲ್ಲೇ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಆಪರೇಷನ್‌ ಸಿಂದೂರದ ನಂತರ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ನಡೆಯಲಿರುವ ಎಸ್‌ಒಸಿ ಸಭೆಗೆ ಪಾಕಿಸ್ತಾನಕ್ಕೆ ಭಾರತ ಆಹ್ವಾನ ನೀಡಿದೆ.

ನವೆಂಬರ್‌ 20ರಿಂದ 22ರ ವರೆಗೆ ನಾಗರಿಕತೆಗಳ ಸಂವಾದ ವೇದಿಕೆಗೆ ಎಸ್‌ಸಿಒನ ಎಲ್ಲ 10 ಸದಸ್ಯ ರಾಷ್ಟ್ರಗಳಿಗೂ ಆಹ್ವಾನ ನೀಡಲಾಗಿದೆ. ಪಾಕಿಸ್ತಾನದ ರಾಷ್ಟ್ರೀಯ ಪರಂಪರೆ ಮತ್ತು ಸಂಸ್ಕೃತಿ ಸಚಿವ ಔರಂಗಝೇಬ್‌ ಖಾನ್‌ ಖಿಚ್ಚಿ ಅವರಿಗೆ ಭಾರತ ಆಹ್ವಾನ ನೀಡಿದೆ.

ಸಂಸ್ಕೃತಿ, ಪರಂಪರೆ ಮತ್ತು ಜನರ ನಡುವಿನ ಬಾಂಧವ್ಯ ಬಲಪಡಿಸುವ ಉದ್ದೇಶದಿಂದ ಈ ಸಭೆ ನಡೆಸಲಾಗುತ್ತಿದೆ. ಉದ್ವಿಗ್ನತೆಯ ನಡುವೆ ಪಾಕಿಸ್ತಾನ ಭಾರತದ ಆಹ್ವಾನ ಸ್ವೀಕರಿಸಿ ಸಭೆಯಲ್ಲಿ ಭಾಗವಹಿಸುತ್ತದೋ ಇಲ್ಲವೋ ಕಾದುನೋಡಬೇಕಿದೆ.

LEAVE A REPLY

Please enter your comment!
Please enter your name here

More like this

25°C ಕೆಳಗಿನ ತಾಪಮಾನ ಇರುವ ಪ್ರವಾಸಿ ತಾಣಗಳು: ಬೇಸಿಗೆಯಿಂದ ಪಾರಾಗಲು ಭಾರತೀಯರಿಗೆ...

ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಉಷ್ಣಾಂಶ ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆ, ತಂಪಾದ ವಾತಾವರಣದ ಪ್ರವಾಸಿ ತಾಣಗಳತ್ತ ಜನರು ಮುಖ ಮಾಡುತ್ತಿದ್ದಾರೆ. ಇತ್ತೀಚಿನ ವರದಿಗಳ...

ಗುಲ್ಮರ್ಗ್ ಅಥವಾ ಪಹಲ್ಗಾಮ್? ಕಾಶ್ಮೀರಕ್ಕೆ ಹೋಗುವ ಮುನ್ನ ಇದನ್ನು ಓದಿ

ಕಾಶ್ಮೀರಕ್ಕೆ ಹೋಗಬೇಕು ಎನ್ನುವುದು ಅನೇಕ ಜನರ ಕನಸು... ಹಿಮ ಮುಚ್ಚಿದ ಬೆಟ್ಟಗಳು, ಹಸಿರು ಕಣಿವೆಗಳು, ತಣ್ಣನೆಯ ಗಾಳಿ, ಕಣ್ಣು ತುಂಬುವ ದೃಶ್ಯಗಳು... ಇವೆಲ್ಲ ಒಂದೇ...

ಕೊಡಗು: ಪ್ರಕೃತಿ ರಮಣೀಯ ಮಂಜಿನ ಬೆಟ್ಟಗಳ ಹಿಂದೆ ಅಡಗಿದೆ ಒಂದು...

ಕೆಲವು ಸ್ಥಳಗಳು ಕೇವಲ ಪ್ರವಾಸಿ ತಾಣಗಳಾಗಿರುವುದಿಲ್ಲ… ಅವು ಕಥೆಗಳಾಗಿ ನಿಮ್ಮೊಳಗೆ ಉಳಿಯುತ್ತವೆ. ಅಂತಹ ಒಂದು ಸ್ಥಳವೇ ಕೊಡಗು! ನಾನು ಮೊದಲ ಬಾರಿ ಕೊಡಗಿನ ಮಂಜಿನ...