ಪಾಕಿಸ್ತಾನದ ಬಲೂಚ್‌ನ ರಾಜಕುಮಾರ್ &‌ ಮೂವರು ಅಂಗರಕ್ಷರ ಕಿಡ್ನಾಪ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ರಾಜಕುಮಾರ ಹಾಗೂ ಆತನ ಮೂವರು ಅಂಗರಕ್ಷಕರನ್ನು ಕಿಡ್ನಾಪ್‌ ಮಾಡಲಾಗಿದೆ.

ಹೌದು, ಕಲಾತ್‌ನ ಪ್ರಸ್ತುತ ಖಾನ್ ಸುಲೇಮಾನ್ ಖಾನ್ ದಾವೂದ್ ಪುತ್ರ ರಾಜಕುಮಾರ ಮುಹಮ್ಮದ್ ಖಾನ್ ಅಹ್ಮದ್‌ಜಾಯ್ ಹಾಗೂ ಅವರೊಂದಿಗೆ ಇದ್ದ ಮೂವರು ಬಂದೂಕುಧಾರಿಗಳನ್ನು ಅಪಹರಿಸಲಾಗಿದೆ. ಸೋಮವಾರ ರಾತ್ರಿ ಖುಜ್ದಾರ್‌ನಿಂದ ಕಲಾತ್‌ಗೆ ಪ್ರಯಾಣಿಸುತ್ತಿದ್ದ ವೇಳೆ ಹೆದ್ದಾರಿಯಲ್ಲಿ ವ್ಯಕ್ತಿಗಳು ಇವರನ್ನು ಅಡ್ಡಹಾಕಿದ್ದಾರೆ.

ಅವರ ಬಳಿ ಸಾಕಷ್ಟು ಶಸ್ತ್ರಗಳಿದ್ದು, ಪ್ರಿನ್ಸ್‌ ಅಹ್ಮದ್‌ಜಾಯ್‌ ವಾಹನವನ್ನು ತಡೆದು ರಾಜಕುಮಾರ ಹಾಗೂ ಆತನ ಬಾಡಿಗಾರ್ಡ್‌ಗಳನ್ನು ಕಿಡ್ನಾಪ್‌ ಮಾಡಿದ್ದಾರೆ. ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿರುವ ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ಪತ್ತೆಯಾಗಿಲ್ಲ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಖಾನ್ ಆಫ್ ಕಲಾತ್’ ಎಂಬುದು, ಪಾಕಿಸ್ತಾನದ ಪ್ರಸ್ತುತ ಬಲೂಚಿಸ್ತಾನ್ ಪ್ರಾಂತ್ಯದಲ್ಲಿರುವ ಕಲಾತ್ ಕೇಂದ್ರಿತ ಬ್ರಾಹುಯಿ-ನೇತೃತ್ವದ ಸಂಸ್ಥಾನವಾಗಿದ್ದ, ಹಿಂದಿನ ‘ಕಲಾತ್ ಖಾನೇಟ್’ನ ಆಡಳಿತಗಾರರ ಐತಿಹಾಸಿಕ ಬಿರುದಾಗಿದೆ. ಕಲಾತ್‌ನ ಖಾನ್‌ ಅಂದರೆ ರಾಜ ಸುಲೇಮಾನ್‌ ದಾವೂದ್‌ ಸದ್ಯ ಯುನೈಟೆಡ್‌ ಕಿಂಗ್ಡಮ್‌ ಹಾಗೂ ವೇಲ್ಸ್‌ನಲ್ಲಿ ವಾಸವಿದ್ದಾರೆ.

LEAVE A REPLY

Please enter your comment!
Please enter your name here

More like this

25°C ಕೆಳಗಿನ ತಾಪಮಾನ ಇರುವ ಪ್ರವಾಸಿ ತಾಣಗಳು: ಬೇಸಿಗೆಯಿಂದ ಪಾರಾಗಲು ಭಾರತೀಯರಿಗೆ...

ನವದೆಹಲಿ: ದೇಶದ ಹಲವು ಭಾಗಗಳಲ್ಲಿ ಉಷ್ಣಾಂಶ ತೀವ್ರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆ, ತಂಪಾದ ವಾತಾವರಣದ ಪ್ರವಾಸಿ ತಾಣಗಳತ್ತ ಜನರು ಮುಖ ಮಾಡುತ್ತಿದ್ದಾರೆ. ಇತ್ತೀಚಿನ ವರದಿಗಳ...

ಗುಲ್ಮರ್ಗ್ ಅಥವಾ ಪಹಲ್ಗಾಮ್? ಕಾಶ್ಮೀರಕ್ಕೆ ಹೋಗುವ ಮುನ್ನ ಇದನ್ನು ಓದಿ

ಕಾಶ್ಮೀರಕ್ಕೆ ಹೋಗಬೇಕು ಎನ್ನುವುದು ಅನೇಕ ಜನರ ಕನಸು... ಹಿಮ ಮುಚ್ಚಿದ ಬೆಟ್ಟಗಳು, ಹಸಿರು ಕಣಿವೆಗಳು, ತಣ್ಣನೆಯ ಗಾಳಿ, ಕಣ್ಣು ತುಂಬುವ ದೃಶ್ಯಗಳು... ಇವೆಲ್ಲ ಒಂದೇ...

ಕೊಡಗು: ಪ್ರಕೃತಿ ರಮಣೀಯ ಮಂಜಿನ ಬೆಟ್ಟಗಳ ಹಿಂದೆ ಅಡಗಿದೆ ಒಂದು...

ಕೆಲವು ಸ್ಥಳಗಳು ಕೇವಲ ಪ್ರವಾಸಿ ತಾಣಗಳಾಗಿರುವುದಿಲ್ಲ… ಅವು ಕಥೆಗಳಾಗಿ ನಿಮ್ಮೊಳಗೆ ಉಳಿಯುತ್ತವೆ. ಅಂತಹ ಒಂದು ಸ್ಥಳವೇ ಕೊಡಗು! ನಾನು ಮೊದಲ ಬಾರಿ ಕೊಡಗಿನ ಮಂಜಿನ...