Latest Posts

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
ತಾಯಿಯ ಸ್ಮರಣಾರ್ಥ 60 ಗಿಡಗಳ ನೆಡುವ ಮೂಲಕ ಜನ್ಮದಿನ ಆಚರಣೆ; ಪರಿಸರ ಸಂರಕ್ಷಣೆಗೆ ದಿನೇಶ್ ಹೊಳ್ಳ ಮಾದರಿ

ಜನ್ಮದಿನವನ್ನು ಕೇಕ್ ಕತ್ತರಿಸಿ, ಅದ್ದೂರಿ ಆಡಂಬರಗಳ ನಡುವೆ ಆಚರಿಸುವವರ ನಡುವೆ ಇಲ್ಲೊಬ್ಬರು ನಮ್ಮನ್ನು ಹೊತ್ತಿರುವ ಭೂಮಿಯಲ್ಲಿ ಹಸಿರು ಹೆಚ್ಚಿಸುವ ಕಾಳಜಿಯಿಂದ ಉದ್ಯಾನ ನಿರ್ಮಿಸಲು ಮುಂದಾಗುತ್ತಿದ್ದಾರೆ… ಅದೂ ಕೂಡಾ ತಮ್ಮ ಹೆತ್ತಿರುವ ತಾಯಿಯ ಹೆಸರಿನಲ್ಲಿ!
ಇವರು ದಿನೇಶ್ ಹೊಳ್ಳ. ಮಂಗಳೂರಿನ ನಿವಾಸಿಯಾಗಿರುವ ಇವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೊಡಂಕಾಪಿನವರು. ಅಪ್ಪಟ ಪರಿಸರ ಪ್ರೇಮಿ. ಚಿತ್ರಕಲೆ, ಗಾಳಿಪಟ ರಚನೆ ಮೂಲಕ ರಾಷ್ಟ್ರ ಅಂತಾರಾಷ್ಟ್ರಗಳಲ್ಲಿ ಛಾಪು ಒತ್ತಿರುವ ಹೊಳ್ಳರು ಸಾಹಿತಿ, ವಿಮರ್ಶಕ, ಛಾಯಾಚಿತ್ರಕಾರ ಕೂಡಾ ಹೌದು.
ನೇತ್ರಾವತಿ ನದಿ ತಿರುವು ಯೋಜನೆ ವಿರುದ್ಧ ಪ್ರಬಲ ದನಿಯೆತ್ತುತ್ತಲೇ ಇರುವ ಇವರು, ಪಶಿಮ ಘಟ್ಟ ಉಳಿಸಿ ಆಂದೋಲನದಲ್ಲಿಯೂ ಸಕ್ರಿಯರು. ಸಹ್ಯಾದ್ರಿ ಸಂಚಯ ಮೂಲಕ ಕಾಡಿನ ರಕ್ಷಣೆಗೆ ಯುವ ಪೀಳಿಗೆಯನ್ನು ಜಾಗೃತಿ ಗೊಳಿಸುತ್ತಿರುವವರು.
ಇದೀಗ ಅವರು ತಮ್ಮ ಹುಟ್ಟುಹಬ್ಬವನ್ನು ಪರಿಸರ ಸಂರಕ್ಷಣೆಯ ಸಂದೇಶದೊಂದಿಗೆ ಸಾರ್ಥಕಗೊಳಿಸುವ ಉದ್ದೇಶದಿಂದ ಆ ದಿನದಂದು ತಾಯಿ ಯಮುನಾ ಹೊಳ್ಳ ಅವರ ಸ್ಮರಣಾರ್ಥ 60 ಗಿಡಗಳನ್ನು ನೆಡುವ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಈ ಕಾರ್ಯಕ್ರಮವನ್ನು ಭಾರತ್ ಸಮೂಹ ಶಿಕ್ಷಣ ಸಂಸ್ಥೆ, ಸಹ್ಯಾದ್ರಿ ಸಂಚಯ, ಗ್ಲೋಬಲ್ ಗ್ರೀನ್ ಟೈಗರ್ಸ್ ಹಾಗೂ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಸಹಯೋಗದಲ್ಲಿ “ತುಳಸೀ ಯಮುನೋದ್ಯಾನ” ಹೆಸರಿನಲ್ಲಿ ಆಯೋಜಿಸಲಾಗಿದೆ.

ಜುಲೈ 15ರಂದು ಬೆಳಗ್ಗೆ 10 ಗಂಟೆಗೆ ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಭಾರತ್ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಪದ್ಮಶ್ರೀ ತುಳಸೀಗೌಡ ಅವರ ವೃಕ್ಷತತ್ವಗಳನ್ನು ಆಧರಿಸಿ, ಖ್ಯಾತ ವೃಕ್ಷಸಂರಕ್ಷಕ ಮಾಧನ ಉಳ್ಳಾಲ್ ಅವರ ನೇತೃತ್ವದಲ್ಲಿ ಗಿಡ ನೆಡುವ ಕಾರ್ಯ ನಡೆಯಲಿದೆ.

ಈ ಕುರಿತು ಮಾತನಾಡಿರುವ ದಿನೇಶ್ ಹೊಳ್ಳ, ಹೆಚ್ಚುತ್ತಿರುವ ಬಿಸಿಲು ಮತ್ತು ಪರಿಸರದ ಹಾನಿಯ ನಡುವೆಯೇ ಪ್ರತಿಯೊಬ್ಬರೂ ಹಸಿರು ಉಳಿಸುವ ಸಂಕಲ್ಪ ಕೈಗೊಳ್ಳಬೇಕು ಎಂದು ಕರೆ ನೀಡಿದ್ದಾರೆ. “ಮರಗಳನ್ನು ಕೇವಲ ನೆಟ್ಟರೆ ಸಾಲದು, ದೇವರಂತೆ ಪೂಜಿಸಿ ಪ್ರೀತಿಯಿಂದ ಬೆಳೆಸಿದಾಗ ಮಾತ್ರ ಅವು ಮುಂದಿನ ಪೀಳಿಗೆಗೆ ನೆರಳಾಗುತ್ತವೆ” ಎಂಬ ಸಂದೇಶವನ್ನು ಅವರು ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಭಾರತ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಯಶವಂತ ಅಮೀನ್, ಸಂಚಾಲಕ ರೋಹಿದಾಸ್ ಬಂಗೇರ, ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಸ್ಥಾಪಕ ಶಶಿಧರ್ ಶೆಟ್ಟಿ, ಕಾರ್ಯದರ್ಶಿ ಜಯಪ್ರಕಾಶ್ ಎಕ್ಕೂರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಪರಿಸರ ಪ್ರೇಮಿಗಳಾದ ಪಿ. ಪದ್ಮನಾಭ ರಾವ್, ರಾಕೇಶ್ ಬೋಳಾರ್ ಹಾಗೂ ಹರೀಶ್ ಅಡ್ಯಾರ್ ಸಹ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ಕಾರ್ಯಕ್ರಮವು ಜನ್ಮದಿನವನ್ನು ಕೇವಲ ಸಂಭ್ರಮದ ದಿನವನ್ನಾಗಿಸದೇ, ಸಮಾಜಕ್ಕೆ ಹಸಿರು ಸಂದೇಶ ಸಾರುವ ಅರ್ಥಪೂರ್ಣ ಆಚರಣೆಯಾಗಿ ರೂಪುಗೊಂಡಿದೆ.

 

ಮಕ್ಕಳ ಜನ್ಮದಿನ ಬಂತೆಂದರೆ ಅವರಿಗಿಂತ ತಾಯಂದಿರಿಗೆ ಖುಷಿ ಹೆಚ್ಚು. ಮಕ್ಕಳನ್ನು ರೆಡಿ ಮಾಡಿ, ಅವರಿಗಿಷ್ಟದ ಅಡುಗೆ ಮಾಡಿ, ಅವರ ಸ್ನೇಹಿತರನ್ನು ಮನೆಗೆ ಸ್ವಾಗತಿಸ್ತಾರೆ. ಹೊಸ ಬಟ್ಟೆ ಕೊಡಿಸಿ ಅದರಲ್ಲಿ ಮಕ್ಕಳನ್ನು ನೋಡಿ ಖುಷಿ ಪಡ್ತಾರೆ. ಮನೆಯಲ್ಲಿಯೇ ಒಂದೊಳ್ಳೆ ಸ್ಟ್ರಾಂಗ್‌ ಪೂಜೆ ಕೂಡ ಮಾಡ್ತಾರೆ. ಈ ಖುಷಿಯಲ್ಲಿ ತಮ್ಮ ಜನ್ಮದಿನ ಯಾವ ತಿಂಗಳು ಅನ್ನೋದನ್ನು ಕೂಡ ತಾಯಂದಿರು ಮರೆತೇ ಹೋಗ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಜನ್ಮದಿನದಂದು ತನ್ನ ತಾಯಿಯ ಸ್ಮರಣಾರ್ಥ ಅರವತ್ತು ಗಿಡಗಳನ್ನು ನೆಟ್ಟು ಸಾರ್ಥಕತೆ ಮೆರೆಯಲು ಮುಂದಾಗಿದ್ದಾರೆ.

ಭಾರತ್‌ ಸಮೂಹ ಶಿಕ್ಷಣ ಸಂಸ್ಥೆ, ಸಹ್ಯಾದ್ರಿ ಸಂಚಯ, ಗ್ಲೋಬಲ್‌ ಗ್ರೀನ್‌ ಟೈಗರ್ಸ್ ಹಾಗೂ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಕಡೆಯಿಂದ ತುಳಸೀ ಯಮುನೋದ್ಯಾನ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದಿನೇಶ್‌ ಹೊಳ್ಳ ಅವರ 60ನೇ ಜನ್ಮದಿನದ ಪ್ರಯುಕ್ತ ಅವರ ತಾಯಿ ಯಮುನಾ ಹೊಳ್ಳರ ಸ್ಮರಣಾರ್ಥ 60 ಗಿಡಗಳನ್ನು ನೆಡಲಾಗುತ್ತಿದೆ.

ಪದ್ಮಶ್ರೀ ತುಳಸೀಗೌಡ ಅವರ ವೃಕ್ಷತತ್ವಗಳೊಂದಿಗೆ ವೃಕ್ಷಸಂರಕ್ಷಕ ಮಾಧನ ಉಳ್ಳಾಲ್‌ರವರ ನೇತೃತ್ವದಲ್ಲಿ ಗಿಡ ನೆಡುವ ಕಾರ್ಯ ನಡೆಯಲಿದೆ. ಉಳ್ಳಾಲದ ಮಾಸ್ತಿಕಟ್ಟೆಯ ಭಾರತ್‌ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಜುಲೈ 15ರಂದು ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.

ಬಿಸಿಲಿನ ತಾಪ ಹೆಚ್ಚಾಗಿ ಮನೆಯಿಂದ ಹೊರಗೆ ಕಾಲಿಡೋದಕ್ಕೂ ಕಷ್ಟವಾಗುತ್ತಿರುವ ಈ ಸಮಯದಲ್ಲಿ ತಲೆ ಮೇಲೆ ಹಸಿರಿನ ಸೂರು ಇದ್ದಿದ್ದರೆ? ಹೀಗೆ ಅಂದುಕೊಂಡು ಸುಮ್ಮನಾಗುವ ಬದಲು ಮರಗಿಡಗಳನ್ನು ಕೈಯಾರೆ ನೆಡಬೇಕು, ದೇವರುಗಳಂತೆ ಅವುಗಳನ್ನು ಪೂಜಿಸಿ ಬೆಳೆಸಬೇಕು ಅನ್ನೋದು ದಿನೇಶ್‌ ಹೊಳ್ಳ ಅವರ ಆಶಯವಾಗಿದೆ.

ಈ ಕಾರ್ಯಕ್ರಮದಲ್ಲಿ ಭಾರತ್‌ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಯಶವಂತ ಅಮೀನ್‌, ಸಂಚಾಲಕರಾದ ರೋಹಿದಾಸ್‌ ಬಂಗೇರ, ಎನ್‌ಇಸಿಎಫ್‌ ಸ್ಥಾಪಕರಾದ ಶಶಿಧರ್‌ ಶೆಟ್ಟಿ ಹಾಗೂ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಕಾರ್ಯದರ್ಶಿಯಾದ ಜಯಪ್ರಕಾಶ್‌ ಎಕ್ಕೂರು ಭಾಗಿಯಾಗಲಿದ್ದಾರೆ. ಪರಿಸರ ಪ್ರೇಮಿಗಳಾದ ಪಿ. ಪದ್ಮನಾಭ ರಾವ್‌, ರಾಕೇಶ್‌ ಬೋಳಾರ್‌, ಹರೀಶ್‌ ಅಡ್ಯಾರ್‌ ಸಾಥ್‌ ನೀಡಿದ್ದಾರೆ.

Latest Posts

spot_imgspot_img