HomeNEWSಜಾಗತಿಕ ಅನಿಶ್ಚಿತತೆ ನಡುವೆ ವಿದೇಶಿ ವಿನಿಮಯ ವೆಚ್ಚ ಕಡಿಮೆ ಮಾಡಿ: ನಾಗರಿಕರಿಗೆ ಅಶ್ವಿನಿ ವೈಷ್ಣವ್ ಮನವಿ

ಜಾಗತಿಕ ಅನಿಶ್ಚಿತತೆ ನಡುವೆ ವಿದೇಶಿ ವಿನಿಮಯ ವೆಚ್ಚ ಕಡಿಮೆ ಮಾಡಿ: ನಾಗರಿಕರಿಗೆ ಅಶ್ವಿನಿ ವೈಷ್ಣವ್ ಮನವಿ

-

spot_img

ನವದೆಹಲಿ: ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಅನಿಶ್ಚಿತತೆ ಮತ್ತು ಪಶ್ಚಿಮ ಏಷ್ಯಾದ ಸಂಘರ್ಷದ ಹಿನ್ನೆಲೆ ವಿದೇಶಿ ವಿನಿಮಯ ಅಗತ್ಯವಿರುವ ವಸ್ತುಗಳ ಮೇಲಿನ ವೆಚ್ಚವನ್ನು ಕಡಿಮೆ ಮಾಡುವಂತೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ದೇಶದ ನಾಗರಿಕರಿಗೆ ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ನಡೆದ CII ವಾರ್ಷಿಕ ವ್ಯವಹಾರ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ಯುದ್ಧ ವಿರಾಮ ಇನ್ನೂ ದೂರದಲ್ಲಿದೆ. ಈ ಹಿನ್ನೆಲೆಯಲ್ಲಿ ಭಾರತವು ಆರ್ಥಿಕವಾಗಿ ಜವಾಬ್ದಾರಿಯುತ ನಡೆ ತಾಳುವುದು ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು.

ನಾಗರಿಕರು ತಮ್ಮ ದೈನಂದಿನ ಜೀವನದಲ್ಲಿ ವಿದೇಶಿ ವಿನಿಮಯ ವೆಚ್ಚ ಕಡಿಮೆ ಮಾಡಬಹುದಾದ ಕ್ಷೇತ್ರಗಳನ್ನು ಗುರುತಿಸಿ ಪ್ರಜ್ಞಾಪೂರ್ವಕವಾಗಿ ನಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಮನವಿಯನ್ನು ಉಲ್ಲೇಖಿಸಿದ ಸಚಿವರು, “ವಿದೇಶಿ ವಿನಿಮಯ ವೆಚ್ಚ ಕಡಿಮೆ ಮಾಡುವುದರ ಜೊತೆಗೆ ವಿದೇಶಿ ವಿನಿಮಯ ಗಳಿಕೆಯನ್ನು ಹೆಚ್ಚಿಸುವತ್ತಲೂ ಗಮನ ಹರಿಸಬೇಕು. ದೇಶದ ಆರ್ಥಿಕ ಸ್ಥಿತಿ ಬಲಪಡಿಸಲು ಈ ಎರಡೂ ಕ್ರಮಗಳು ಒಂದೇ ಸಮಯದಲ್ಲಿ ಸಾಗಬೇಕು” ಎಂದು ಹೇಳಿದರು.

ಈ ವೇಳೆ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ನಡೆಯುತ್ತಿರುವ ವೇಗದ ಅಭಿವೃದ್ಧಿ ಮತ್ತು ಹೊಸ ಕೈಗಾರಿಕಾ ಕ್ರಾಂತಿಯ ಬಗ್ಗೆ ಮಾತನಾಡಿದ ಸಚಿವರು, ವಿವಿಧ ವಲಯಗಳಲ್ಲಿ ಉತ್ಪಾದಕತೆ ಮತ್ತು ಕಾರ್ಯಕ್ಷಮತೆ ಹೆಚ್ಚಿಸಲು AI ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.

ದೇಶದ ಡಿಜಿಟಲ್ ಮೂಲಸೌಕರ್ಯ ಬಲಪಡಿಸಲು ಮೂರು ಪ್ರಮುಖ ಸಬ್‌ಸೀ ಕೇಬಲ್ ನೆಟ್‌ವರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ ಅವರು, AI ಕ್ಷೇತ್ರದಲ್ಲಿ ಇನ್ನಷ್ಟು ಬೆಳವಣಿಗೆ ಸಾಧಿಸಲು ಹೂಡಿಕೆದಾರರು ಮುಂದೆ ಬರಬೇಕಾಗಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here

- Advertisment -spot_img